ತಾಲೂಕ ಅಭಿವೃದ್ದಿಗೆ ಶ್ರಮಿಸಿ- ಇಮ್ರಾನ್ ಬಡೇಸಾಬ್

ಸಿರವಾರ,ಅ.೩೦- ಸಿರವಾರ ತಾಲೂಕ ಘೋಷಣೆಯಾಗಿ ೪ ವರ್ಷಗಳೂ ಮುಗಿದರೂ ಸಹ ಇನ್ನೂ ಅನೇಕ ಸರ್ಕಾರಿ ಕಛೇರಿಗಳು ಪ್ರಾರಂಭವಾಗಿಲ್ಲ, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದೂ ನಮ್ಮ ಸಂಘಟನೆಯಿಂದ ತಾಲೂಕ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಕನ್ನಡಿಗರ ರಕ್ಷಣಾ ಸಂಘದ ರಾಜ್ಯಾದ್ಯಕ್ಷ ಇಮ್ರಾನ್ ಬಡೆಸಾಬ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಮಾತನಾಡಿದ ಅವರು ಅನುದಾನ ಒದಗಿಸದೆ ತಾಲೂಕ ಘೋಷಣೆ ಮಾಡಲಾಗಿದೆ, ಇಲ್ಲಿಯವರೆಗೂ ಕೇಲವೊಂದು ಸರ್ಕಾರಿ ಕಛೇರಿಗಳು ಸಿರವಾರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದವರು ಮಾನ್ವಿಗೆ ಹೋಗಬೇಕಾದಂತಹ ಪರಸ್ಥಿತಿ ಇದೇ. ಗ್ರಾಮಾಂತರ ಪ್ರಧೇಶದಲ್ಲಿರುವಂತಹ ಬಸ್ ನಿಲ್ದಾಣ ಸಿರವಾರದಲ್ಲಿ ಇದೇ, ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದರೂ, ನಿತ್ಯ ನೂರಾರು ಬಸ್ ಓಡಾಟ, ಸಾವಿರಾರು ಪ್ರಮಾಣಿಕರು ಪ್ರಯಾಣ ಮಾಡುತ್ತಾರೆ. ಆದರೂ ಸಹ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಶಾಸಕರು ಮತ್ತು ಸಂಸದರು ಬಸ್ ನಿಲ್ದಾಣಕ್ಕೆ ಮುದಾಗದೆ ಇದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ. ಅಕಾಲಿಕ ಮಳೆಯಿಂದಾಗಿ ಅನೇಕ ರಸ್ತೆಗಳು ಹಾಳಾಗಿದ್ದೂ ಅವುಗಳನ್ನು ಸಹ ದುರಸ್ಥಿಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡದಿದ್ದರೆ ಜಿಲ್ಲೆಯಲ್ಲಿ ಉಗ್ರ ರೀತಿಯಲ್ಲಿ ಹೊರಾಟ ಮಾಡಲಾಗುವುದು ಎಂದರು.
ಹೈ-ಕ ಮಹಿಳಾ ಅಧ್ಯಕ್ಷೆ ಜ್ಯೋಥಿ ಗೌಡ ಮಾತನಾಡಿ ಸಿರವಾರ ತಾಲೂಕನಲ್ಲಿಯೆ ಅನೇಕ ಸಮಸ್ಯೆಗಳಿದ್ದೂ, ಇಲ್ಲಿಂದ ಜಿಲ್ಲಾ ಕೇಂದ್ರದಲ್ಲಿರುವ ಅನೇಕ ನಾಯಕ ಅಲ್ಲಿ ಅಭಿವೃದ್ದಿ ಮಾಡುತ್ತೆವೆಂದು ಹೇಳುತ್ತಿರುವುದು ನೋಡಿದರೆ ಹಾಸ್ಯಾಸ್ಪದವಾಗುತ್ತಿದೆ. ಸ್ವಂತ ಊರು ಅಭಿವೃದ್ದಿ ಮಾಡದವರು ಬೇರೆಯ ಊರಿನ ಅಭಿವೃದ್ದಿಗೆ ಹಗಲು ಕನಸು ಕಾಣುತ್ತಿದ್ದಾರೆಂದು ಆರೋಪಿಸಿದರು.
ಸಿರವಾರ ತಾಲೂಕ ಕನ್ನಡಿಗರ ರಕ್ಷಣಾ ಸಂಘದ ಅಧ್ಯಕ್ಷರಾಗಿ ಚನ್ನಬಸವ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು. ಜಿಲ್ಲಾಧ್ಯಕ್ಷ ನರಸಿಂಹ, ಕುಮಾರ ಭಜಂತ್ರಿ, ಉದಯಕುಮಾರ, ಅಮರೇಶ ದೊರೆ, ರಾಚಪ್ಪನಾಯಕ, ಮಂಜುನಾಥ ನಾಯಕ ಮರಾಠ, ಹನುಮಂತ, ಈರಣ್ಣ ಅತ್ತನೂರು, ಚೆನ್ನಮ್ಮ ಕಸನದೊಡ್ಡಿ, ಬೇಗಂ ಸೇರಿದಂತೆ ಇನ್ನಿತರರು ಇದ್ದರು.