ತಾಲೂಕ ಅಭಿವೃದ್ದಿಗೆ ವಿಜಯೇಂದ್ರ ಕೊಡುಗೆ ಅಪಾರ-ವಲಿ ಗುತ್ತೆದಾರ

ಸಿರವಾರ.ಜು.೨೨- ಅಧಿಕಾರಿಗಳಿಗೆ ಇಚ್ಚಾ ಶಕ್ತಿ ಇದ್ದರೆ ಅಭಿವೃದ್ಧಿ ಮಾಡಬಹುದು ಎಂಬುದು ತಹಸೀಲ್ದಾರ ವಿಜಯೇಂದ್ರ ಹುಲಿನಾಯಕ ನಿದರ್ಶನವಾಗಿದಾರೆ ಎಂದು ಅಂಜುಮಾನ್ ಕಮಿಟಿ ಅಧ್ಯಕ್ಷ ಹಾಗೂ ಜೆಡಿಎಸ್ ಯುವ ಮುಖಂಡ ಮಹ್ಮದ ವಲಿ ಗುತ್ತೆದಾರ ಹೇಳಿದರು.
ಸಿರವಾರ ತಹಸೀಲ್ದಾರ ವಿಜಯೇಂದ್ರ ಹುಲಿನಾಯಕ ಅವರ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಹುಟ್ಟುಹಬ್ಬದ ಶುಭಾಷಯ ತಿಳಿಸಿ ನಂತರ ಮಾತನಾಡಿದ ಅವರು ನೂತನ ತಾಲೂಕಿಗೆ ಅನೇಕ ಜನ ತಹಸೀಲ್ದಾರ ಬಂದಿದರು, ಆದರೆ ಅದರಲ್ಲಿ ಕೇಲವರು ಮಾತ್ರ ಉತ್ತಮ ಕೆಲಸ ಮಾಡಿದ್ದಾರೆ.
ವಿಜಯೇಂದ್ರ ಅವರು ತಹಸೀಲ್ದಾರ ಕಚೇರಿಯ ಕೆಲಸವನ್ನು ಯಾವುದೇ ಪೆಂಡಿಗ್ ಉಳಿಸಿಲ್ಲ. ಕಛೇರಿಗೆ ಬರುವವರಿಗೆ ನೇರವಾಗಿ ಬೇಟಿಯಾಗಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸುತ್ತಿದ್ದಾರೆ. ಕಾಟಚಾರಕ್ಕೆ ಜಯಂತಿಗಳನ್ನು ಆಯೋಜನೆ ಮಾಡದೆ, ತಾಲೂಕ ಆಡಳಿತದಿಂದ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ.
ಅಧಿಕಾರಿಗಳು ಜನರೊಂದಿಗೆ ಬೇರೆತಾಗ ಇಂತಹ ಕೆಲಸಗಳು ಸಾದ್ಯ ಎಂದರು. ಜೆ.ಡಿಎಸ್ ಪ್ರಧಾನ ಕಾರ್ಯದರ್ಶಿ ದಾನಪ್ಪ, ಸತ್ತರ ಸಾಬ್, ಇಬ್ರಾಹಿಂ ಸಾಬ್, ರಫಿ, ಇಸ್ಮಾಯಿಲ್, ಅಜ್ಮೀರ್, ಬಂದೇನವಾಜ್, ಮಹಿಬೂಬ ಸೇರಿದಂತೆ ಇನ್ನಿತರರು ಇದ್ದರು,