ತಾಲೂಕ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

ಅಣ್ಣಿಗೇರಿ,ಮಾ25: ತಾಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ ತಾಲೂಕ ಆಡಳಿತ ಅಧಿಕಾರಿಗಳು ಗ್ರಾಮಸ್ಥರ ಮನೆ ಮನೆ ತೆರಳಿ ಸಮೀಕ್ಷೆ ಜೊತೆಗೆ ಅವರಿಂದ ಅಹವಾಲುಗಳನ್ನು ಸ್ವೀಕರಿಸಿ, ತಕ್ಷಣವೇ ಪರಿಹಾರ ಸಿಗುವಲ್ಲಿ ತಹಶೀಲ್ದಾರ ಕೊಟ್ರೇಶ ಗಾಳಿ ಕ್ರಮ ಕೈಗೊಂಡರು.
ಪಿಂಚಣಿ ಸೌಲಭ್ಯ ಕುರಿತು ಯಾವುದೇ ಸಮಸ್ಯೆ ಗ್ರಾಮಸ್ಥರಿಂದ ಬರಲಿಲ್ಲ. 60 ಜನ ಪಿಂಚಣಿದಾರರಿಗೆ ಸೌಲಭ್ಯ ಕಲ್ಪಿಸಲಾಗಿದೆ. 60 ವರ್ಷ ಮೇಲ್ಪಟ್ಟ 15 ಜನ ಪಡಿತರ ಚೀಟಿದಾರರಿಗೆ ತಕ್ಷಣವೇ ಅರ್ಜಿಗಳನ್ನು ಸ್ವೀಕರಿಸಿ ಪಡಿತರ ಫಲಾನುಭವಿಗಳ ಲಿಸ್ಟ್‍ನಲ್ಲಿ ಸೇರ್ಪಡೆಗೊಳಿಸಲಾಯಿತು. ಗ್ರಾಮದ ಎಲ್ಲಾ ಸಿಸಿ ರಸ್ತೆಗಳು ಪೂರ್ಣಗೊಂಡಿದ್ದು, 2 ಹೊಸ ಪೆನ್ಸಿನ್ ಸ್ಕೀಮ್ ಅರ್ಜಿಪಡೆದುಕೊಳ್ಳಲಾಗಿದೆ. ಜನತಾ ಪ್ಲಾಟಿನ ಚರಂಡಿ ವ್ಯವಸ್ಥೆ ಬಗ್ಗೆ ಪಂಚಾಯತ್ ಅಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ. ಆದಾರ ಕಾರ್ಡು, ಗುರ್ತಿನ ಚೀಟಿ, ವೃದ್ದಾಪ ವೇತನ, ವಿಧವಾವೇತನ, ಇನ್ನು ಅನೇಕ ಸರಕಾರದ ಯೋಜನೆಗಳ ಫಲಾನುಭವಿಗಳಿದ್ದು, ಯಾವುದೇ ಅರ್ಜಿಗಳು ಬಂದಿಲ್ಲ. ಮೂಲಸೌಲಭ್ಯಗಳ ವ್ಯವಸ್ಥೆಗೆ ಗ್ರಾಮ.ಪಂ ಅನೇಕ ಸೌಲಭ್ಯಗಳನ್ನು ಕೈಗೊಂಡಿದ್ದು, ವಿದ್ಯುತ್ ದ್ವೀಪಗಳ 3 ಕಂಬಗಳಿಗೆ ಒಂದು ವಾರದೊಳಗೆ ಕಲ್ಪಿಸಲು ಪಿಡಿಓ ಅಧಿಕಾರಿಗಳಿಗೆ ಸೂಚಿಸಿದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕುಡಿಯುವ ನೀರಿನ ಸೌಲಭ್ಯಕ್ಕೆ ಮನೆಗೆ ನಳದ ಕಲೆಕ್ಷನ್ ಕೊಡುವಲ್ಲಿ ಪಿಡಿಓ. ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ತಾಲೂಕಿನ ಆಡಳಿತ ವರ್ಗ ಬೆಳಿಗ್ಗ 9-00 ಗಂಟೆಯಿಂದ ಸಂಜೆ 5-00 ಗಂಟೆಯವರಿಗೆ ಗ್ರಾಮಸ್ಥರ ಬೇಡಿಕೆ ಆಲಿಸಿ ಪೂರೈಸುವಲ್ಲಿ ಕ್ರಮ ಕೈಗೊಂಡಿದ್ದು ಕಂಡುಬಂತು.
ಈ ಸಂದರ್ಭದಲ್ಲಿ ತಹಶೀಲ್ದಾರ ಕೊಟ್ರೇಶ ಗಾಳಿ, ಸಿಬ್ಬಂದಿ ವರ್ಗ, ತಾಲೂಕಿನ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳ ವರ್ಗ ಸಿಬ್ಬಂದಿ ಉಪಸ್ಥಿತರಿದ್ದು. ಸಮೀಕ್ಷೆ , ಮಾಡಿ ತಕ್ಷಣವೇ ಪರಿಹಾರ ಕಲ್ಪಿಸುವಲ್ಲಿ ಕ್ರಮ ಕೈಗೊಂಡರು.