ತಾಲೂಕು ಸಿಐಯುಟಿವತಿಯಿಂದ ವಿಶ್ವ ಕಾರ್ಮಿಕರ ದಿನ ಆಚರಣೆ

ಸಿರುಗುಪ್ಪ, ಮೇ.1- ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಹಮಾಲಿ ಕಾರ್ಮಿಕರ ಕಛೇರಿಯಲ್ಲಿ 135ನೇ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಸಿಐಯುಟಿಯ ತಾಲೂಕು ಉಪಾಧ್ಯಕ್ಷ ಹಾಗೂ ಹಿರಿಯ ಸಂಘಟನೆಗಾರ ಹೆಚ್.ಬಿ.ಓಬಳೇಶಪ್ಪ ಸಿಐಯುಟಿ ಧ್ವಜಾರೋಹಣವನ್ನು ನೆರವೇರಿಸಿದರು.
ನಂತರ ಮಾತನಾಡಿದ ಅವರು ದೇಶದಲ್ಲಿ ಎಲ್ಲಾರಿಗೆ ಒಂದೇ ಕಾನೂನು ಜಾರಿಗೊಳಿಸಿ ಕಾರ್ಮಿಕರ, ರೈತರ ಬದುಕು ಅಭಿವೃದ್ದಿಗೊಳಿಸುವ ಸರ್ಕಾರವು ಇಂದು ಕಣ್ಮುಚಿಕೊಂಡು ಕುಳಿತಿವೆ, ಇಂತಹ ಕರೋನಾ ಸಂದರ್ಭದಲ್ಲಿ ಕಾರ್ಮಿಕರಿಗೆ ಕೆಲಸವಿಲ್ಲದೆ, ಜೀವನ ನಡೆಸುವುದು ಸಂಕಷ್ಟ ಎದುರಾಗಿದೆ ಆರ್ಥಿಕವಿಲ್ಲದೆ ಜೀವನ ಮತ್ತು ಕುಟುಂಬ ನಿರ್ವಹಣೆ ಅಸಾಧ್ಯವಾಗಿದೆ, ಸರ್ಕಾರವು ರೈತರ, ಕಾರ್ಮಿಕರ ಖಾತೆಗೆ ಆರ್ಥಿಕ ನೆರವು ನೀಡಿ ಶ್ರಮಿಕರನ್ನು ಸಂರಕ್ಷಿಸ ಬೇಕೇಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಸಿಐಯುಟಿ ತಾಲೂಕು ಅಧ್ಯಕ್ಷೆ ಬಿ.ಉಮಾದೇವಿ, ಸಿಐಯುಟಿ ಜಿಲ್ಲಾ ಉಪಾಧ್ಯಕ್ಚ ಹೆಚ್.ತಿಪ್ಪಯ್ಯ, ಪ್ರಧಾನಕಾರ್ಯದರ್ಶಿ ಬಿ.ಸುರೇಶ, ಸಹಕಾರ್ಯದರ್ಶಿ ಬಿ.ಎಲ್.ಈರಣ್ಣ, ಸದಸ್ಯರಾದ ಹುಲೇಪ್ಪ, ಲಕ್ಷ್ಮಣ, ನಾಗರಾಜ ಗೌಡ, ದುರುಗಮ್ಮ, ತಿಮ್ಮಪ್ಪ, ವೀರೇಶ ಇದ್ದರು.