ತಾಲೂಕು ಸಾಹಿತ್ಯ ಸಮ್ಮೇನಾಧ್ಯಕ್ಷರಿಗೆ ಅಧಿಕೃತ ಆಹ್ವಾನ


ಸಂಜೆವಾಣಿ ವಾರ್ತೆ
ಕುಕನೂರು, ಮಾ.12: ತಾಲೂಕಿನ ರಾಜೂರ ಗ್ರಾಮದಲ್ಲಿ ಮಾಚ್೯ ೨೩ ರಂದು ನಡೆಯಲಿರುವ ೨ ನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇನಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ  ಆರ್.ಪೀ. ರಾಜೂರು ಅವರಿಗೆ  ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಪದಾಧಿಕಾರಿಗಳು ಭಾನುವಾರ ಅವರ ಮನೆಗೆ ಭೇಟಿ ನೀಡಿ ಅಧಿಕೃತ ಆಹ್ವಾನ ನೀಡಿದರು. ನಂತರ ಶ್ರೀ ಇಟಗಿ ಭಿಮಾಂಬಿಕಾದೇವಿ ದೇವಿ ಮಠ ದಲ್ಲಿ ನಡೆದ ಸಮ್ಮೇನಾಧ್ಯಕ್ಷರೀಗೆ ಅಭಿನಂದನಾ ಸಮಾರಂಭ ಜರುಗಿತು.   ಕಾಯ೯ಕ್ರಮ ಉದ್ದೇಶಿಸಿ ಸ.ಪ. ಪೂವ ೯ ಕಾಲೇಜು ಪ್ರಾಚಾರ್ಯ ಈಶಪ್ಪ ಮಳಗಿ ಮಾತನಾಡಿ, ಸಮ್ಮೇಳನ ಅಧ್ಯಕ್ಷ ಆರ್.ಪೀ. ರಾಜೂರ ಅವರು ಎರಡು ಕೃತಿ ಗಳನ್ನ್ ರಚಿಸಿ, ಸಾರಸ್ವತ ಲೋಕ ದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಅನೇಕ ವಿದ್ವಾಂಸರು ರಾಜೂರ ಅವರ ಕೃತಿಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.   ಹೀಗಾಗಿ ಇವರ ಅಧ್ಯಕ್ಷತೆಯ ಸಮ್ಮೇಳನಕ್ಕೆ ವಿಶೇಷ ಕಳೆ ಬಂದಿದೆ. ಎಂದರು.    ಕಸಾಪ ತಾಲೂಕು ಅಧ್ಯಕ್ಷ ಕಳಕಪ್ಪ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಣ್ಯರಾದ ಶರಣಪ್ಪ ಅರಕೇರಿ, ಬಸವರಾಜ್ ಮೇಟಿ, ಈಶಪ್ಪ ಮಳಗಿ, ತಾ ಪಂ. ಕಾಯ೯ನಿವಾ೯ಹಕ ಅಧಿಕಾರಿ ರಾಮಣ್ಣ ದೊಡ್ಡಮನಿ, ಬಸವರಾಜ್ ಬಣ್ಣದ ಬಾವಿ, ರಾಮಣ್ಣ ತಾಳ ವಾರ್, ವೀರನಗೌಡ ಪಾಟೀಲ್, ನಾಗರಾಜ್ ಮಜುರಪ್ಪ ಬೇನಕಲ್, ಫಕೀರ ಸಾಬ್ ನದಾಫ, ವೀರಣ್ಣ ಅಣ್ಣಿಗೇರಿ  , ಕೆ.ಆರ್.ಕುಲಕರ್ಣಿ,  ಬಸವರಾಜ್ ಬಿನ್ನಲ್, ಎ.ಪೀ.ಮುಧೋಳ್ ಮೊದಲಾದವರು ಹಾಜರಿದ್ದರು  ನಂತರ ವಿವಿಧ ಸಂಘ ಸಂಸ್ಥೆ ಗಳಿಂದ ಸನ್ಮಾನ ನಡೆದವು  ಕಲಾವಿದರಾದ ಮುರಾರಿ ಭಜೆಂತ್ರಿ ಹಾಗೂ ಪಾವ೯ತಿ ಗುತ್ತೇದಾರ್ ಕನ್ನಡದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಮಹಾಂತೇಶ್ ಅಂಗಡಿ ಸ್ವಾಗತಿಸಿದರು. ಪಿರಾಸಾಬ್ ದಾಫೆದಾರ್ ಹಾಗೂ ಉಮೇಶ್ ಕಂಬಳಿ ನಿರೂಪಿಸಿದರು