ತಾಲೂಕು ರಚನೆ ಕರವೇ ಕಾರ್ಯಕರ್ತರು ಮನವಿ

ಮುದಗಲ್,ಜೂ.೧೪-
ಪಟ್ಟಣ ಜನತೆಯ ಬಹು ದೊಡ್ಡ ಬೇಡಿಕೆಯಾದ ಮುದಗಲ್ ನೂತನ ತಾಲೂಕು ಕೇಂದ್ರ, ಕೋಟೆ ಉತ್ಸವ, ವೆಲ್‌ಕಮ್ ಬೋರ್ಡ್‌ವರೆಗೆ ಡಿವೈಡರ್ ನಿರ್ಮಾಣ ಮತ್ತು ಕುಡಿಯುವ ನೀರಿನ ಸಮಸ್ಯೆ ಕಲ್ಪಿಸುವಂತೆ ಕರವೇ ಕಾರ್ಯಕರ್ತರು ಶಾಸಕ ಮಾನಪ್ಪ ಡಿ. ವಜ್ಜಲ್ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಎಂಟು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತಿದ್ದು ನೀರಿಗಾಗಿ ಜನರು ಹಾಹಾಕಾರ ಶುರುವಾಗಿದ್ದು ಕೊಡಲೇ ನೀರಿನ ಸಮಸ್ಯೆ ಬಗೆಹರಿಸಬೇಕು. ಮುದಗಲ್ ಪ್ರಸಿದ್ಧ ಐತಿಹಾಸಿಕ ಪಟ್ಟಣವಾಗಿದ್ದು ೫೭ ಕಂದಾಯ ಗ್ರಾಮಗಳು ಹಾಗೂ ೧೮ ತಾಂಡಗಳನ್ನು ಒಳಗೊಂಡಿರುವ ನಾಡ ಉಪ ತಹಸೀಲ್ದಾರ ಕಚೇರಿ ಹೊಂದಿದ್ದು ತಾಲ್ಲೂಕು ಕೇಂದ್ರ ರಚನೆಗೆ ಎಲ್ಲಾ ಅರ್ಹತೆ ಹೊಂದಿದೆ ಆದ್ದರಿಂದ ತಾವು ಮುಖ್ಯಮಂತ್ರಿ ಬಳಿಗೆ ನಿಯೋಗ ತೆಗೆದುಕೊಂಡು ಹೋಗಿ ಆದಷ್ಟೂ ಬೇಗ ಮುದಗಲ್ ತಾಲ್ಲೂಕು ರಚನೆ ಮಾಡಿ ಪಟ್ಟಣ ಜನತೆಯ ಬಹು ದಿನಗಳ ಬೇಡಿಕೆಯನ್ನು ಹಿಡೇರಿಸಬೇಕು ಮತ್ತು ಪಟ್ಟಣದ ಎರಡು ಕಡೆ ಸ್ವಾಗತ ಬೋರ್ಡಿನವರೆಗೆ ಡಿವೈಡರ್ ನಿರ್ಮಾಣ ಮಾಡಬೇಕೆಂದು ಎಂದು ಕರವೇ ಅಧ್ಯಕ್ಷ ಎಸ್ ಎ ನಯೀಮ್ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಎಸ್.ಎ ನಯೀಮ್, ನಗರ ಘಟಕದ ಅಧ್ಯಕ್ಷ ಸಾಬು ಹುಸೇನ್, ಸಾಬೀರ, ರಹೆಮಾನ ಧೂಲಾ ಜಂಬಾಳಿ, ಮಹಾಂತೇಶ ಚೆಟ್ಟರ್, ಅಬ್ದುಲ್ ಮಜೀದ್, ಇಸ್ಮಾಯಿಲ್ ಬಳಿಗಾರ ಉಪಸ್ಥಿತರಿದ್ದರು.