ತಾಲೂಕು ಮಟ್ಟದ ನೃತ್ಯ ಆಯೋಜನೆ

ಆನೇಕಲ್, ಜು. ೩೧: ಚಂದಾಪುರದ ಎಎನ್‌ಆರ್ ಕಲ್ಯಾಣ ಮಂಟಪದಲ್ಲಿ ನವ್ಯನಾಟ್ಯ ಸಾಂಸ್ಕೃತಿಕ ಕೇಂದ್ರ ವತಿಯಿಂದ ತಾಲೂಕು ಮಟ್ಟದಲ್ಲಿ ಡ್ಯಾನ್ಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ವೇಳೆ ನವ್ಯ ನಾಟ್ಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಹಳೆ ಚಂದಾಪುರ ಆನಂದ್ ಮಾತನಾಡಿ ಕಲೆ ಪ್ರತಿಯೊಬ್ಬರಲ್ಲೂ ಇರುತ್ತದೆ.
ಆ ಕಲೆಯನ್ನು ಅನಾವರಣಗೊಳಿಸಲು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಪ್ರೋತ್ಸಾಹಿಸಬೇಕು ಎಂದರು.
ಡ್ಯಾನ್ಸ್ ಮತ್ತು ನಾಟಕಗಳು ಮಕ್ಕಳ ವಿದ್ಯಾಭ್ಯಾಸ ಮಾಡುವ ಜೊತೆಯಲ್ಲಿ ಇದನ್ನು ಅಭ್ಯಾಸವನ್ನು ಮಾಡಿದರೆ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಒಳ್ಳೆ ಭವಿಷ್ಯ ದೊರೆಯುತ್ತದೆ ಎಂದು ತಿಳಿಸಿದರು.
ಶಾಸಕ ಬಿ. ಶಿವಣ್ಣ, ಆರ್.ಕೆ. ಕೇಶವರೆಡ್ಡಿ, ನೃತ್ಯ ತರಬೇತಿದಾರರಾದ ಡಾಕ್ಟರ್ ಪ್ರದೀಪ್, ಮಮತಾ, ವೆಂಕಟೇಶ್, ಆನೇಕಲ್ ಮಲ್ಲೇಶ್, ನವ್ಯ ನಾಟ್ಯ ಸಾಂಸ್ಕೃತಿಕ ಕೇಂದ್ರ ಪದಾದಿಕಾರಿಗಳು ಭಾಗವಹಿಸಿದ್ದರು.