ತಾಲೂಕು ಮಟ್ಟದ ಕರೋನಾ ನಿಯಂತ್ರಣ ಸಭೆ

ಸಿರುಗುಪ್ಪ, ಏ.30: ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ ನೇತೃತ್ವದಲ್ಲಿ ಕರೋನಾ ನಿಯಂತ್ರಣ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ತಹಶೀಲ್ದಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕೋವಿಡ್-19ನ ಎರಡನೇ ಅಲೆಯ ಪಾಸಿಟಿವ್ ಸೋಂಕಿತರು ಹೋಂ ಐಸುಲೇನ್ ಪಡೆಯುತ್ತಿರುವವರು ಕಣ್ಮುಚ್ಚಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ, ಮೊದಲು ಅಂತವರನ್ನು ಕೋವಿಡ್ ಕೇರ್ ಸೇಂಟರನಲ್ಲಿ ಚಿಕಿತ್ಸೆ ನೀಡಲು ಕರೆತನ್ನಿ, ಎಲ್ಲಾ ಇಲಾಖೆಗಳು ಒಟ್ಟುಗೂಡಿ ಕರೋನಾ ನಿಯಮಗಳನ್ನು ಪಾಲಿಸಿ ಕರೋನಾ ವೈರಸ್‍ನ್ನು ತಡೆಗಟ್ಟಲು ಎಲ್ಲಾರಿಗೆ ತಿಳಿಸಿದರು.
ಹೋಂ ಐಸುಲೇಸನ್ ನೋಡಲ್ ಅಧಿಕಾರಿ ಡಾ.ವಿದ್ಯಾಶ್ರೀ ಮಾತನಾಡಿ ಪಾಸಿಟಿವ್ ಸೋಂಕಿತರು ಮನೆಯಲ್ಲಿ ಚಿಕಿತ್ಸೆಗೆ ಸರಿಯಾಗಿ ಸ್ಪಂಧಿಸದೆ, ಅವರು ನಿಂತ್ರಣದಲ್ಲಿ ಇರದೆ ಇನ್ನೊಬ್ಬರೊಂದಿಗೆ ಸಂಪರ್ಕ ಮಾಡಿ ಸೋಂಕನ್ನು ವೇಗವಾಗಿ ಹಚ್ಚಿಸುತ್ತಿದ್ದಾರೆ, ಮನೆಯಲ್ಲಿ ಚಿಕಿತ್ಸೆ ಪಡೆಯುವವರು ಇನ್ನೊಬ್ಬರೊಂದಿಗೆ ಸಂರ್ಪಕ ಮಾಡದೆ ವೈದ್ಯಾಧಿಕಾರಿಗಳು ಸಂರ್ಪಕಿಸಬೇಕು, ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಸಾರ್ವಜನಿಕರು ಮಾಸ್ಕ ಇಲ್ಲದೆ ಹೊರಗಡೆ ಬರುವುದನ್ನು ಕಟ್ಟುನಿಟ್ಟಾಗಿ ತಡೆಯುವಂತೆ ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ ಮಾತನಾಡಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನ ದಿನೇ ಹೆಚ್ಚಾಗುತ್ತಿದ್ದು, ಈಗ ಇರುವ 50 ಬೆಡ್‍ಗಳು ಪೂರ್ತಿಯಾಗುವ ಸಂದರ್ಭ ಹೆಚ್ಚುತ್ತಿದೆ, ಈ ಹಿಂದೆ ಮಾಡಿದಂತೆ ವಿವಿಧ ವಸತಿ ನಿಲಯಗಳಲ್ಲಿ ಕೋವಿಡ್ ಸೇಂಟರ್ ತೆಗೆದು ಹೆಚ್ಚಿನ ಬೆಡ್‍ಗಳನ್ನು ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಅನುಮತಿಯನ್ನು ಪಡೆಯಲಾಗಿದೆ, ಹೋಂ ಐಸುಲೇಸನ್‍ನಲ್ಲಿ ಚಿಕಿತ್ಸೆ ಪಡೆತಯುವ ಸೋಂಕಿತರನ್ನು ತಿವ್ರ ನಿಗವಹಿಸಬೇಕು, ತಾಲೂಕಿನ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದರು, ಇರುವ ಸಿಬ್ಬಂದಿಯು ನಿರಂತರ ಶ್ರಮವಹಿಸಿ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ನೀಡುವಾಗ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದಾರೆ, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಕರೋನಾ ನಿಯಂತ್ರಣಕ್ಕೆ ಸಹಕಾರ ನೀಡಿ, ಪಾಸಿಟಿವ ಎಂದು ವರದಿ ಬಂದ ನಂತರ ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸದೆ ಚಿಕಿತ್ಸೆಯನ್ನು ನೀಡ ಬೇಕೆಂದು ತಿಳಿಸಿದರು.
ತಾಲೂಕು ಕೃಷಿ ಸಹಾಯಕ ನಿರ್ದೇಶಕ ಹಾಗೂ ಕರೋನಾ ನಿಯಂತ್ರಣ ನೋಡಲ್ ಅಧಿಕಾರಿ ನಜೀರ್ ಅಹ್ಮದ್ ಮಾತನಾಡಿ ಹೋಂ ಐಸುಲೇನ್‍ಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರು ವೈಧ್ಯರು ನೀಡಿದ ಔಷಧಿ ಮಾತ್ರೆಗಳನ್ನು ಸರಿಯಾಗಿ ಬಳಸುತ್ತಾರೆ ಇಲ್ಲ ಎಂದು ಆಶಾ ಕಾರ್ಯಕರ್ತರು ನಿಗವಹಿಸಬೇಕು, ಸೋಂಕಿತರಿಗೆ ಪೋಷಕರು ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಧರಿಸಿ ಉಪಚಾರ ನಡೆಸುವಂತೆ ಎಚ್ಚರಿಸಬೇಕೆಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ದೇವರಾಜ ಮಾತನಾಡಿ ಕೋವಿಡ್‍ನಿಂದಾಗಿ ಲಾಕ್ ಡೌನ್ ಆಗಿದೆ ಎಂದು ಸಾರ್ವಜನಿಕರು ಎಚ್ಚರ ಇಲ್ಲದೆ, ಬೆಳಗಿನ ಸಮಯದಲ್ಲಿ ಚಹ ಅಂಗಡಿಯ ಮುಂದೆ ಮಾಸ್ಕ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ದಂಡು ದಂಡಾಗಿ ನಿಂತು ಸುದ್ದಿಗಳನ್ನು ಹೇಳುತ್ತಿದ್ದು ಇದನ್ನು ಪೊಲೀಸ್ ಅಧಿಕಾರಿಗಳು ನಿಯಂತ್ರಿಸುವಂತೆ ಹೇಳಿದರು.
ಡಾ.ರೋಹಿಣಿ ಮಾತನಾಡಿ ಹಚ್ಚೊಳ್ಳಿ ಗ್ರಾಮದ ಸುತ್ತಮುತ್ತ ಅನೇಕ ಮದುವೆ ಸಮಾರಂಭಗಳಿಗೆ ಅನುಮತಿ ನೀಡಿದ್ದರು, ಮದುವೆಯಲ್ಲಿ ಕರೋನಾ ನಿಯಮಗಳನ್ನು ಪಾಲಿಸದೆ ಹೆಚ್ಚು ಜನ ಸೇರುತ್ತಿದ್ದಾರೆ, ಹೆಚ್ಚು ಇರುವ ಮದುವೆ ಸಮಾರಂಭಗಳಿಗೆ ಅಧಿಕಾರಿಗಳು ತೇರಳಿದರೆ ರಾಜೀಕಿಯ ವ್ಯಕ್ತಿಗಳ ಮೂಲಕ ಪೋನ್ ಮಾಡಿಸುತ್ತಿದ್ದಾರೆ, ಆಂದ್ರಪ್ರದೇಶದಿಂದ ಹೆಚ್ಚು ಜನರು ಬರುತ್ತಿದ್ದಾರೆ, ಯಾವುದೇ ಮಾಸ್ಕ ಇಲ್ಲ, ಸಾಮಾಜಿಕ ಅಂತರ ಇಲ್ಲದೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ, ಗ್ರಾಮೀಣ ಭಾಗಗಳಲ್ಲಿ ಕಟ್ಟೆಗಳಲ್ಲಿ ಗುಂಪು ಗುಂಪಾಗಿ ಕುಳಿತು ಸುದ್ದಿಹೇಳುತ್ತಿರುವುದನ್ನು ಅಧಿಕಾರಿಗಳು ನಿಯಂತ್ರಿಸುವಂತೆ ತಿಳಿಸಿದರು.
ಪೌರಾಯುಕ್ತ ಪ್ರೇಮ್ ಚಾಲ್ರ್ಸ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಅನವಶ್ಯಕವಾಗಿ ಕಿರಕುಂಟು ಮಾಡುತ್ತಿದ್ದಾರೆ, ನಾವು ಬಂದಾಗ ಮಾತ್ರ ಮರೆಯಾಗಿ ನಾವು ಹೋದ ನಂತರ ಮತ್ತೆ ರಸ್ತೆಯ ಮೇಲೆ ವ್ಯಾಪಾರ ನಡೆಸುತ್ತಿದ್ದಾರೆ, ತಾಲೂಕಿನ ಯಾವುದೇ ಅಧಿಕಾರಿಗಳು ಇಂತರವನ್ನು ನಿಗವಹಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ನರೇಗಾ ಅಧಿಕಾರಿ ನಿರ್ಮಾಲ, ಪಿ.ಎಸ್.ಐ ರಂಗಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಾಷು, ಡಾ.ಚೆನ್ನಬಸವ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.