
ಕಲಬುರಗಿ:ಆ.25: ಇತ್ತೀಚೆಗೆ ನಡೆದ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ ಹೋಬಳಿ ಮತ್ತು ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಕ್ಯಾಂಪ್‍ಬೆಲ್ಸ್ ಪ್ರಾಥಮಿಕ ಪ್ರೌಢ ಶಾಲೆಯ ಬಾಲಕಿಯರು ವಾಲಿಬಾಲ್ ಹಾಗೂ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅದೇ ರೀತಿ ಬಾಲಕರು, ವಾಲಿ ಬಾಲ್ ಹಾಗೂ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪ್ರೌಢ ಶಾಲೆಯ ಬಾಲಕಿಯರು, ವಾಲಿಬಾಲ್ ಹಾಗೂ ಥ್ರೋ ಬಾಲನಲ್ಲಿ ಪ್ರಥಮ ಸ್ಥಾನ ಮತ್ತು ಬಾಲಕರು ಥೋ ಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದು, ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆಆಯ್ಕೆ ಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಅಧಿಕಾರಿ ಇಮ್ಮಾನ್ಯುವೇಲ್ ಜೆ, ಮುಖ್ಯಗುರು ಸೂರ್ಯಕಾಂತ ಪವಾರ, ತಂಡಗಳ ವ್ಯವಸ್ಥಾಪಕರಾದ ಸಂತೋಷ ದೇಶಮುಖ, ರಾಜೇಶ ಕುಲಕರ್ಣಿ ಹಾಗೂ ದೈಹಿಕ ಶಿಕ್ಷಕರಾದ ದತ್ತಾತ್ರೇಯ ಜೇವರ್ಗಿ, ಶೀಲಾದೇವಿ ಸಂತಸ ವ್ಯಕ್ತ ಪಡಿಸಿದ್ದಾರೆ.