ತಾಲೂಕು ಪಂಚಾಯಿತಿಯಲ್ಲಿ ರಾಜ್ಯೋತ್ಸವ

ಕೊಟ್ಟೂರು ಅ 01 :ಕನ್ನಡ ನಾಡು ನುಡಿಯ ಸಂಸ್ಕೃತಿ ಸಂರಕ್ಷಣೆ ನಮ್ಮಲ್ಲರ ಮೇಲೆ ಇದೆ ಎಂದು ತಾಲೂಕುಪಂಚಾಯಿತಿ ಅಧ್ಯಕ್ಷ ಶಾನಬೋಗರ ಗುರು ಮೂರ್ತಿಹೇಳಿದರು.
ಪಟ್ಟಣದತಾಲೂಕುಪಂಚಾಯಿತಿಕಾರ್ಯಲಯದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಮಾತನಾಡಿ
ಕನ್ನಡ ಭಾಷೆಗೆ ಸಾಹಿತಿಗಳ ಕೊಡುಗೆ ಅಪಾರವಾಗಿದೆ ಇಂಥಹ ಭಾಷೆಯನ್ನು ಉಳಿಸಿ ಬೆಳಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಕೇವಲ ನವೆಂಬರ ಒಂದು ತಿಂಗಳಿಗಷ್ಟೇ ಕನ್ನಡ ಭಾಷೆ ಮೇಲಿನ ಪ್ರೀತಿ ಸೀಮಿತವಾಗಿರದೇ ನಿರಂತರವಾಗಿರಬೇಕು ಎಂದು
ಎಂದುಹೇಳಿದರು. ಮಾಜೀ ತಾಲೂಕು ಪಂಚಾಯಿತಿ ಅಧ್ಯಕ್ಷಹಾಲಿಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವೆಂಕಟೇಶನಾಯ್ಕ ತಾ.ಪಂಸದಸ್ಯೆ ಅಕ್ಕಮ್ಮ
ತಾಲೂಕು ಯೋಜನಾಧಿಕಾರಿ ವಿಜಯ ಕುಮಾರಬೆಣ್ಣೆ, ಎಡಿಕೆಂಚಪ್ಪ, ಸಿಬ್ಬಂದಿನಾಗರಾಜ ಸೇರಿದಂತೆ ಇತರರು ಇದ್ದರು.