ತಾಲೂಕು ಪಂಚಾಯಿತಿಯಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆ ಶಿಬಿರ

ಸಂಜೆವಾಣಿ ವಾರ್ತೆ

 ಹರಿಹರ ಆ 4 ;   ಸಾಮಾನ್ಯವಾಗಿ ಜ್ವರ, ಕೆಮ್ಮು , ಚಿಕೂನ್‌ ಗುನ್ಯಾ ಸೇರಿದಂತೆ ಹಲವು  ಕಾಯಿಲೆಗಳು ಸುಲಭವಾಗಿ ಅನುಭವಕ್ಕೆ ಬರುತ್ತವೆ. ಆದರೆ, ಅಸಾಂಕ್ರಾಮಿಕ ರೋಗಗಳು ಅನುಭವಕ್ಕೆ ಬರುವ ವೇಳೆಗೆ ಚಿಕಿತ್ಸೆ ಪಡೆದರೂ ಗುಣಮುಖವಾಗದಂತಹ ಪರಿಸ್ಥಿತಿ ತಲುಪಿರುತ್ತವೆ. ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ನಟರಾಜ್ ಹೇಳಿದರುಜಿಲ್ಲಾ ಮತ್ತು   ತಾಲೂಕು ಪಂಚಾಯಿತಿ ಜಿಲ್ಲಾ ಮತ್ತು ತಾಲೂಕು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ . ಆಶ್ರಯದಲ್ಲಿ ಅಸಾಂಕ್ರಾಮಿಕ ರೋಗಗಳ  ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದವರು  ತಾಲೂಕು ಪಂಚಾಯಿತಿ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಾಂತರ ಭಾಗದ ಜನರ ಆರೋಗ್ಯ ತಪಾಸಣೆ ನಡೆಸಿ, ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಕೊಡಿಸಲಾಗುತ್ತದೆ  ಸಾಂಕ್ರಾಮಿಕ ರೋಗಗಳಿಗಿಂತ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಜನರನ್ನು ಬಾಧಿಸುತ್ತಿವೆ. ಉತ್ತಮ ಜೀವನ ಶೈಲಿ ಹೊಂದಿರದಿದ್ದರೆ ಬಿಪಿ, ಶುಗರ್‌.ರಕ್ತದ ಒತ್ತಡ.ಮಧುಮೇಹ.ಕ್ಯಾನ್ಸರ್.ಕ್ಷಯ ರೋಗ.  ಸೇರಿದಂತೆ ಅಸಾಂಕ್ರಾಮಿಕ ರೋಗಗಳಿಗೆ ಅವಕಾಶ ಮಾಡಿ ಕೊಟ್ಟಂತಾಗುತ್ತದೆ ಇಂತಹ ರೋಗಗಳಿಗೆ ಅವಕಾಶ ಮಾಡಿಕೊಳ್ಳದೆ ಆರೋಗ್ಯ ಸದೃಢವಾಗಿ ಇಟ್ಟುಕೊಳ್ಳುವುದಕ್ಕೆ ಜಾಗೃತರಾಗಬೇಕೆಂದು ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದರು ಹರಿಹರ ತಾಲ್ಲೂಕಿನ ಗ್ರಾಮ ಪಂಚಾಯತ್ ಎಲ್ಲಾ ಸಿಬ್ಬಂದಿಗಳಿಗೆ  ಸೇರಿದಂತೆ ಒಟ್ಟು  179 ಸಾಂಕ್ರಾಮಿಕ  ರೋಗಗಳು  ತಪಾಸಣೆ ಮಾಡಲಾಯಿತುಜಿಲ್ಲಾ  ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳಾದ ಡಾಕ್ಟರ್ ಗಂಗಾಧರ್, ತಾಲುಕಾ ಆರೋಗ್ಯ ಅಧಿಕಾರಿಗಳಾದ ಚಂದ್ರಮೋಹನ್ ಡಿಎಂ, ಡಾಕ್ಟರ್ ಮಂಜುನಾಥ್, ಡಾಕ್ಟರ್ ಪ್ರತಾಪ್, ಡಾಕ್ಟರ್ ವಿಕ್ರಂ,ಡಾಕ್ಟರ ನಾಗರಾಜ್, ಲೆಕ್ಕಾಧಿಕಾರಿ ನಿಂಗರಾಜ್, ಜಿಲ್ಲಾ ಆರೋಗ್ಯ ಮೇಲ್ವಿಚಾರಣೆ ಅಧಿಕಾರಿ ಎಂ ವಿ ಹೊರಕೇರಿ, ಆರ್ ಬಿ ಎಸ್ ಕೆ ತಂಡದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ತಾಲೂಕ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಉಮ್ಮಣ್ಣ, ಸುಧ ಸುಲಕೆ, ದಾದಾಪೀರ್, ಮಂಜುನಾಥ್, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು