ತಾಲೂಕು ಪಂಚಾಯತ್ ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಪತ್ರ

ಕಾರಟಗಿ:ಜ:10: ತಾಲೂಕು ಪಂಚಾಯತ್ 2020-21 ಸಾಲಿನ ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಿಗೆ ಕಾರಟಗಿ ತಾಲೂಕು ಪಂಚಾಯತಿ ಅಧ್ಯಕ್ಷ ಪ್ರಕಾಶ್ ಭಾವಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ,
ಶನಿವಾರದಂದು ಕುಕನೂರು ತಾಲೂಕಿನ ಬಾನಾಪುರ ಗ್ರಾಮದ ಬಳಿ ಎಂಎಸ್ ಏಕಸ್ ಸಂಸ್ಥೆ ಆಯೋಜಿಸಿದ್ದ ಕೊಪ್ಪಳ ಆಟಿಕೆಗಳ ಕ್ಲಸ್ಟರ್ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ,
2020-21 ಸಾಲಿನ ಆರ್ಥಿಕ ವರ್ಷ ಮುಗಿಯುವ ಹಂತಕ್ಕೆ ಬಂದಿದ್ದು, ಹಣ ಬಿಡುಗಡೆಗೊಳ್ಳದೆ ಇರುವದ್ದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ, ಕಾರಟಗಿ ಪಟ್ಟಣ ನೂತನ ತಾಲೂಕು ಪಂಚಾಯತ್ ಆಗಿ ರಚನೆಯಾಗಿದ್ದು ತೀರ ಹಿಂದುಳಿದ ಪ್ರದೇಶವಾಗಿದೆ, ಮುಖ್ಯಮಂತ್ರಿಗಳು ವಿಶೇಷ ಕಾಳಜಿ ವಹಿಸಿ ಅನುದಾನ ಬಿಡುಗಡೆ ಮಾಡಲು ಮನವಿ ಪತ್ರದಲ್ಲಿ ತಿಳಿಸಿದ್ದಾರೆ,
ಹಾಗೂ 2019-20 ರ ಸಾಲಿನ ಆರ್ಥಿಕ ವರ್ಷದ ಕಾಮಗಾರಿಗಳಿಗೆ ಕ್ರಿಯೆಯೋಜನೆ ತಯಾರಿಸಿ ಕಾಮಗಾರಿಗಳಿಗಳನ್ನು ಪೂರ್ಣಗೊಳಿಸಿ ಬಿಲ್ ಗಳನ್ನು ಖಜಾನೆಗೆ ಸಲ್ಲಿಸಲಾಗಿದೆ, ಸಲ್ಲಿಸಲಾದ ಕಾಮಗಾರಿಗಳಿಗೆ ಸಂಬಂದಿಸಿದ ಹಣವನ್ನು ಹಿಂಪಡೆಯಲಾಗಿದ್ದು, ಹಿಂಪಡೆದ ಅನುದಾನವನ್ನು ಮರು ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ,