ತಾಲೂಕು ಕೇಂದ್ರವಾದರು ತರಕಾರಿ ಮಾರುಕಟ್ಟೆ ಇಲ್ಲ ಮಳೆ ಬಂದರೆ ಸಾಕು ಮಾರುಕಟ್ಟೆ ಕೆಸರು ಗದ್ದೆ

ಕೊಟ್ಟೂರು ಜ 08: ಪಟ್ಟಣದಲ್ಲಿ ಪ್ರತಿ ಗುರುವಾರದಂದು ಪಟ್ಟಣದಲ್ಲಿ ನಡೆಯುವ ವಾರದ ಸಂತೆ ಮೈದಾನ ಅಭಿವೃದ್ಧಿ ಮಾಡದ ಕಾರಣ ಅಕಾಲಿಕ ಬುಧವಾರ ಸುರಿದ ರಾತ್ರಿ ಮಳೆಗೆ ಕೆಸರು ಗದ್ದೆಯಾಗಿಮಾರ್ಪಟ್ಟಿದೆ. ಸಂತೆಗೆ ಬರುವ ವ್ಯಾಪಾರಸ್ಥರು ಮತ್ತು ಗ್ರಾಹಕರು ತೊಂದರೆ ಪಡುವಂತಾಗಿದೆ.
ತಾಲ್ಲೂಕಿನಲ್ಲಿಯೇ ಸುತ್ತ ಮುತ್ತಲಿನ ಪ್ರತಿ ಹಳ್ಳಿ ಹಳ್ಳಿಗಳಿಂದ ಬರುವ ರಾಶಿ ರಾಶಿ ತರಕಾರಿಗಳು ಅತೀ ದೊಡ್ಡ ವಾರದ ಸಂತೆ ಎಂದು ಪ್ರಸಿದ್ಧಿ ಪಡೆದಿದೆ. ಆದರೆ, ಮೂಲಸೌರ್ಕಯವಿಲ್ಲದೇ ತರಕಾರಿ ಮಾರುಕಟ್ಟೆ ಗೆ ಸೂಕ್ತ ಜಾಗವಿಲ್ಲದೆ ಶ್ರೀ ಸ್ವಾಮಿ ರಥೋತ್ಸವ ಜಾಗದಲ್ಲಿ ತರಕಾರಿ ಮಾರುಕಟ್ಟೆ ಆಗಿದೆ ಇದಕ್ಕೆ ಮಾರುಕಟ್ಟೆಗೆ ಬೇಕಿದೆ ಜಾಗದ ಕೊರತೆ.ನಂತರ ಕೊಟ್ಟೂರು ಅಭಿವೃದ್ಧಿಗೆ ಸ್ಥಳೀಯ ರಾಜಕಾರಣಿಗಳು ಹಾಗೂ ಶಾಸಕರು ಆಸಕ್ತಿವಹಿಸುತ್ತಿಲ್ಲ
ತರಕಾರಿ ವ್ಯಾಪಾರಿಗಳಿಗೆ ಕಟ್ಟೆಗಳು ನಿರ್ಮಿಸಲಿಲ್ಲ.ಪ್ರತಿ ಒಂದು ಮಾರುಕಟ್ಟೆಗಳಲ್ಲಿ ಸಿಸಿ ರಸ್ತೆಗಳಿಲ್ಲ. ಮಳೆ ಬಂದರೆ ಸಂತೆ ಮೈದಾನ ಕೆಸರು ಗದ್ದೆ. ವ್ಯಾಪಾರಿಗಳು ಹಾಗೂ ಖರೀದಿದಾರರು ವ್ಯವಹಾರ ನಡೆಸಲು ಹರಸಾಹಸ ಪಡಬೇಕು. ತರಕಾರಿ ಖರೀದಿಗಾಗಿ ಸಂತೆಯಲ್ಲಿ ತಿರುಗಾಡಲು ಆಗುವುದಿಲ್ಲ. ಕಾಲು ಜಾರಿ ಬಿದ್ದು ಮೈತುಂಬ ರಾಡಿ ಹಚ್ಚಿಕೊಂಡು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.
ತಾಲೂಕು ಕೇಂದ್ರವಾಗಿ ಬೆಳೆದು ನಿಂತ ಕೊಟ್ಟೂರು ಅಲ್ಲಿ ಒಂದು ಸಂತೆ ಮಾರುಕಟ್ಟೆ ಇಲ್ಲವಂತಾಗಿದೆ ಇಲ್ಲಿನ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಶಾಸಕರು ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ತರಕಾರಿ ಮಾರುಕಟ್ಟೆ ರೈತರು ಏಳಿದರು.
ಆದರೆ,ಸಂತೆ ಮೈದಾನ ಅಭಿವೃದ್ಧಿಗೆ ಖರ್ಚು ಮಾಡಿಲ್ಲ. ಈ ಸಂತೆಗೆ ತಾಲೂಕು ಸುತ್ತಮುತ್ತಲಿನ ಹಳ್ಳಿಗಳು ಅಲ್ಲದೆ ಅಕ್ಕ ಪಕ್ಕದ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಕೆಲವೊಂದು ಅಂಗಡಿ ಮಾಲೀಕರು ಮೈದಾನ ಅತಿಕ್ರಮಣದಿಂದ ಸ್ಥಳದ ಅಭಾವ ಉಂಟಾಗಿ ತಿರುಗಾಡಲು ತೊಂದರೆಯಾಗುತ್ತಿದೆ ಎಂದು ಗ್ರಾಹಕರು ದೂರುತ್ತಾರೆ.
ಸಂತೆ ಮೈದಾನದಲ್ಲಿ ತರಕಾರಿ ಮಾರಲು ನಮಗೇ ಒಂದು ಸೂಕ್ತ ಜಾಗವಿಲ್ಲ ಕೂಡಲೇ ತರಕಾರಿ ಹೊಸ ಮಾರುಕಟ್ಟೆ
ನಿರ್ಮಿಸಬೇಕು ನಂತರ.ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು ನಂತರ ಶೀಘ್ರದಲ್ಲೇ ಹೊಸ ಮಾರುಕಟ್ಟೆ ಜಾಗವನ್ನು ಗುರುತಿಸಿ ರೈತರಿಗೆ ಮಾರುಕಟ್ಟೆ ಕಲ್ಪಿಸಿ ಎಂದು ಸ್ಥಳೀಯ ವ್ಯಾಪಾರಿಗಳು ಹಾಗೂ ಗ್ರಾಹಕರು ಆಗ್ರಹಿಸಿದ್ದಾರೆ.


ಕೊಟ್ಟೂರು ದಿನೇ ದಿನೇ ಜನ ಸಂದಣಿ ಹೆಚ್ಚುತ್ತಿದೆ ತಾಲೂಕು ಕೇಂದ್ರ ವಾಗಿದೆ ಸಮೀಪದ ಹಳ್ಳಿ ಹಳ್ಳಿಗಳಲ್ಲಿ ತರಕಾರಿ ಮಾರುಕಟ್ಟೆ ಇದೆ ಆದರೆ ದೊಡ್ಡ ತಾಲೂಕು ಆದರೂ ತರಕಾರ ವ್ಯಾಪಾರಕ್ಕೆ ಒಂದು ಮಾರುಕಟ್ಟೆ ವ್ಯವಸ್ಥೆ ನಿರ್ಮಿಸಿಲ್ಲ. ರಾಡಿಯಲ್ಲಿ ಕುಳಿತು ತರಕಾರಿ ಮಾರುತ್ತಿದೇವೆ. ಆದರೆ, ಸೌಲಭ್ಯ ಮಾತ್ರ ಶೂನ್ಯ. ನಮ್ಮ ಗೋಳು ಯಾರ ಮುಂದೆ ಹೇಳಬೇಕು
ಬೀದಿ ಬದಿಯ ತರಕಾರಿ ಮಾರುವ ರೈತರು