ತಾಲೂಕು ಕಸಾಪ ಅಧ್ಯಕ್ಷ ಎಸ್.ಎಂ.ನಾಗರಾಜ ಸ್ವಾಮಿ ಅವರಿಗೆ ಕೊಡೇಕಲ್ಲ್ ಬಸವಶ್ರೀ ರಾಜ್ಯ ಮಟ್ಟದ ಪ್ರಶಸ್ತಿ

ಸಿರುಗುಪ್ಪ :ನ.21- ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಂ.ನಾಗರಾಜ ಸ್ವಾಮಿ ಅವರು ಕೊಡೇಕಲ್ಲ್ ಬಸವಶ್ರೀ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನ.21ರಂದು ವಿಜಯಪುರ ಜಿಲ್ಲೆಯ ನಂದಿಹಾಳ್‍ನ ಕೊಡೇಕಲ್ ಬಸವೇಶ್ವರ ರಂಗಮಂದಿರದಲ್ಲಿ ಪ್ರಶಸ್ತಿಯ ಸಮಾರಂಭದಲ್ಲಿ ನೀಡಲಿದ್ದಾರೆ. ಈ ಒಂದು ಪ್ರಶಸ್ತಿಯು ಸಾಹಿತ್ಯ ಮತ್ತು ಕನ್ನಡ ಸೇವೆಗೈದವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗುತ್ತದೆ.