ತಾಲೂಕು ಆಡಳಿತದ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

ಔರಾದ್ :ಫೆ.22: ತಾಲೂಕಾ ಆಡಳಿತ ವತಿಯಿಂದ ತಹಸಿಲ್ ಕಾರ್ಯಾಲಯದಲ್ಲಿ ತ್ರಿಪದಿ ಬ್ರಹ್ಮ,ಕವಿ ಸರ್ವಜ್ಞ ಜಯಂತಿ ಆಚರಣೆ ಮಾಡಲಾಯಿತು.

ಮಾನ್ಯ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಸರ್ವಜ್ಞ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕುಂಬಾರ ಸಮಾಜದ ಹಿರಿಯ ಮುಖಂಡರು, ಯುವಕರು, ಕುಂಬಾರ ಸಮಾಜದ ಅಧ್ಯಕ್ಷ ನಾಗಪ್ಪ ಕುಂಬಾರ, ನರಸಿಂಗ ಕುಂಬಾರ, ಅನಿಲ ಕುಂಬಾರ, ರಮೇಶ ಕುಂಬಾರ, ವಿಠಲ ಕುಂಬಾರ, ಬಾಬುರಾವ ಕುಂಬಾರ, ಈರಣ್ಣ ಕುಂಬಾರ, ನಾಮದೇವ ಕುಂಬಾರ, ಲಕ್ಷ್ಮಣ ಕುಂಬಾರ, ಅಂಬಾದಾಸ ಕುಂಬಾರ ಸೇರಿದಂತೆ ಇನ್ನಿತರರಿದ್ದರು.