ತಾಲೂಕು ಆಡಳಿತದಿಂದ ಶಂಕರಾಚಾರ್ಯರ ಜಯಂತಿ

ಕೊಟ್ಟೂರು, ಮೇ.17- ತಾಲೂಕ ಕಛೇರಿಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಸರಳವಾಗಿ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು.
ಈ ಸಮಯದಲ್ಲಿ ತಹಶೀಲ್ದಾರರಾದ ಅನಿಲ್ ಕುಮಾರ್.ಜಿ, ಶಿರಸ್ತೇದಾರರಾದ ಶಿವಕುಮಾರ ಜಿ, ಶ್ರೀಮತಿ ಎಸ್ ಲೀಲಾ, ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ ಎಸ್ ಎಂ, ಸಿಬ್ಬಂದಿಯಾದ ಶಿರಾಜ್ ವುದ್ದೀನ್, ರವಿ ಹರಪನಹಳ್ಳಿ, ಸಿ ಮ ಗುರುಬಸವರಾಜ, ಮಹೇಂದ್ರ ಸರ್ವೆ ಸೂಪರ್ ವೈಜರ್, ಗ್ರಾಮ ಲೆಕ್ಕಿಗರಾದ ಶ್ರೀಮತಿ ಸುನಿತಾ ಯು ಎಂ, ಆಶಾ ಎಂ, ರಮೇಶ ಹಾಗೂ ಇತರರು ಇದ್ದರು.