ತಾಲೂಕು ಆಡಳಿತದಿಂದ ಭಗೀರಥ ಮಹರ್ಷಿಗೆ ಅಪಮಾನ

ಯಡ್ರಾಮಿ:ಮೇ.15:ತಾಲೂಕು ಆಡಳಿತದಿಂದ ಭಗೀರಥ ಮಹರ್ಷಿಯ ಜಯಂತಿಯ ದಿನದಂದು ಭಗೀರಥ ಮಹರ್ಷಿ ಅವರಿಗೆ ಅಪಮಾನ ಮಾಡಿದ್ದಾರೆ ತಕ್ಷಣ ತಹಸೀಲ್ದಾರ ಅವರನ್ನು ಅಮಾನತ್ತು ಆಗಬೇಕು ಹಾಗೂ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ ಘಟನೆ ನಡೆದಿದೆ.
ಮಂಗಳವಾರ ತಾಲೂಕು ಆಡಳಿತ ವತಿಯಿಂದ ಭಗೀರಥ ಮಹರ್ಷಿ ಇಲಿ ಕಚ್ಚಿದ ಹಳೆಯ ಪೆÇೀಟೋಕ್ಕೆ ಪೂಜೆ ಮಾಡುವ ಮೂಲಕ ಅಪಮಾನ ಮಾಡಿದ್ದಾರೆ.ಈ ಹಿಂದಿನ ವರ್ಷವೂ ಕೂಡ ಇದೇ ರೀತಿಯ ಪೆÇೀಟೋ ಇಟ್ಟು ಪೂಜೆ ಮಾಡುವಾಗ ಸಮಾಜದವರು ವಿರೋಧ ಮಾಡಿದಾಗ ಆಡಳಿತದಿಂದ ತಪ್ಪಾಗಿದೆ ಮುಂದೆ ಈ ರೀತಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ವರ್ಷವೂ ಕೂಡ ಭಗೀರಥ ಮಹರ್ಷಿಯ ಅವರ ಹಳೆಯ ಇಲಿ ಕಚ್ಚಿದ ಪೆÇೀಟೋ ಇಟ್ಟು ಅಪಮಾನ ಮಾಡಿದ್ದು ತಕ್ಷಣ ಜಿಲ್ಲಾಧಿಕಾರಿಗಳು ಇವರನ್ನು ಅಮಾನತ್ತು ಮಾಡಿ ತಹಸೀಲ್ದಾರ ಅವರು ಕ್ಷಮೆ ಕೇಳಬೇಕು ಎಂದು ತಾಲೂಕು ಕಚೇರಿಯ ಮುಂದೆ ಎರಡೂ ಘಂಟೆಗಳ ಕಾಲ ಆಡಳಿತ ವಿರುದ್ಧ ಪ್ರತಿಭಟನೆ ಕೈಗೊಂಡರು.
ತಕ್ಷಣ ತಹಸೀಲ್ದಾರ ಶಶಿಕಲಾ ಅವರು ಪ್ರತಿಭಟನೆ ನಡೆಯುತ್ತಿದ್ದ ಹಾಗೆ ತಕ್ಷಣ ಬಂದು ನಮ್ಮ ಇಲಾಖೆ ವತಿಯಿಂದ ಹಾಗೂ ನಮ್ಮಿಂದ ತಪ್ಪಾಗಿದ್ದು ಮುಂದಿನ ದಿನಮಾನದಲ್ಲಿ ಈ ರೀತಿ ತಪ್ಪುಆಗದರೀತಿಯಿಂದ ನೋಡಿಕೊಳ್ಳಲಾಗುವುದು ಎಂದು ಕೈ ಮುಗಿದು ಕ್ಷಮೆ ಯಾಚನೆ ಮಾಡಿದರು.
ತಾಲೂಕಿನಲ್ಲಿ ಯಾವುದೇ ಸಮಾಜದ ಸಂತರ ಜಯಂತಿಯನ್ನು ಗೌರವಿತವಾಗಿ ಆಚರಣೆ ಮಾಡಬೇಕು ಒಂದು ವೇಳೆ ಇದೇ ರೀತಿಯಿಂದ ಯಾವುದೇ ಸಮಾಜದ ಸಂತರ ಸಾಮಾಜಿಕ ಸುಧಾರಕರ ಜಯಂತಿ ಅಚ್ಚುಕಟ್ಟಾಗಿ ಮಾಡದೆ ಹೋದರೆ ತಮ್ಮ ವಿರುದ್ಧ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕ್ಕೆ ನೀಡಿ ಪ್ರತಿಭಟನೆ ವಾಪಸ್ ಪಡೆದ ಘಟನೆ ನಡೆಯಿತ್ತು.