ತಾಲೂಕು ಅಧ್ಯಕ್ಷನಾಗಿ ಮರ್ಲಹಳ್ಳಿ ರವಿಕುಮಾರ್ ಆಯ್ಕೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜ.22: ಇಂದು ಪಟ್ಟಣದ ಶ್ರೀ ನುಂಕೇಮಲೆ ಕಾಲಭೈರವ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗೆ ತಾಲೂಕು ಅಧ್ಯಕ್ಷರನ್ನಾಗಿ ಮರ್ಲಹಳ್ಳಿ ರವಿಕುಮಾರ್ ರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ ಮಾತನಾಡಿ ಸಂಘಟನೆಯ ಸಿದ್ದಾಂತ, ನಿಯಮ ನಡುವಳಿಕೆ ಗಳನ್ನು ಅರಿತು ಹೋರಾಟ ಮಾಡಬೇಕು, ನಮ್ಮ ಹೋರಾಟ ಇಂದಿಗೂ ಎಂದೆಂದಿಗೂ ರೈತ ಪರ ವಾಗಿರಬೇಕು,  “ಹಸಿರು ರೈತರ  ಉಸಿರು” ಪ್ರೋ. ಎಂ. ಡಿ. ನಂಜುಂಡಸ್ವಾಮಿ ಯ ಕನಸಿನಂತೆ ಸಂಘ ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್. ಬಿ. ನಿಜಲಿಂಗಪ್ಪ ಜಿ ಪ್ರ ಕಾ. ಈಚಗಘ ಸಿದ್ದ ವೀರಪ್ಪ, ಬಸವರಾಜಪ್ಪ, ಸಂಜೀವಪ್ಪ ಸೂರವ್ವನಹಳ್ಳಿ ರಾಜಣ್ಣ ನಾಗರಾಜ ಕಟ್ಟೆ, ಯಜೇನಹಳ್ಳಿ ನಾಗರಾಜ್ ಭೀಮಣ್ಣ, ಪಿಟಿ ಹಟ್ಟಿ ನಿಂಗಣ್ಣ, ಈರಣ್ಣ, ತಮ್ಮಣ್ಣ, ಇನ್ನು ಮುಂತಾದವರಿದರು.

One attachment • Scanned by Gmail