ತಾಲೂಕುಪಂಚಾಯಿತಿ ಮುಂದೆ ಪ್ರತಿಭಟನೆ

ಕೊಟ್ಟೂರು:ನ.9- ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮಹೊಲದಲ್ಲಿ ಬದುನಿರ್ಮಾಣಮಾಡಿ9ತಿಂಗಳು ಕಳೆದರು ಹಣಬಿಡುಗಡೆ ಮಾಡದ ಹಿನ್ನಲೆಯಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಮುಂಭಾಗ ಪ್ರತಿಭಟನೆ ಮಾಡಿದರು.
ತಾಲೂಕಿನ ಹ್ಯಾಳ್ಯಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಲ್ಲನಾಯಕನಹಳ್ಳಿ ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮಹೊಲದಲ್ಲಿ ಬದು ನಿರ್ಮಾಣ ಮಾಡಿದರು ಹಣ ಪಾವತಿ ಮಾಡದೇ ಅಧಿಕಾರಿಗಳು ನಿರ್ಲಕ್ಷ ತೋರಿದ್ದು ಇದರಿಂದ ಬೇಸತ್ತು ಇಂದು ಪ್ರತಿಭಟನೆಗೆ ಮುಂದಾದರು.