ತಾಲೂಕಿನ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ : ಶಾಸಕ ಲಕ್ಷ್ಮಣ ಸವದಿ

ಅಥಣಿ :ಅ.3: ದೇಶ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಗ್ರಾಮಗಳ ಅಭಿವೃದ್ಧಿಯಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ರಸ್ತೆಗಳು ಹಾಗೂ ಮೂಲ ಸೌಲಭ್ಯಗಳು ಸಮರ್ಪಕವಾಗಿ ಜನರಿಗೆ ದೊರೆತಾಗ ಜನರು ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ನಾವು ಪಣತೊಟ್ಟಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.
ಅವರು ತಾಲೂಕಿನ ಅವರಖೋಡ ಗ್ರಾಮದ ಬಳಿ ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯ ವತಿಯಿಂದ 3.5 ಕೋಟಿ ರೂ.ಗಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಮತಕ್ಷೆ?ತ್ರಕ್ಕೆ ಹೆಚ್ಚಿನ ಅನುದಾನ ತರುವುದರ ಮೂಲಕ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರಾಜ್ಯ ಸರಕಾರ ವಿವಿಧ ಇಲಾಖೆಗಳಿಗೆ ಹೆಚ್ಚಿನ ಅನುದಾನವನ್ನು ನೀಡುತ್ತಿದೆ. ಮತಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಸರಕಾರ ಸ್ಪಂದನೆ ಮಾಡುತ್ತಿದೆ. ಹೆಸ್ಕಾಂ ಇಲಾಖೆಗೆ ರಾಜ್ಯದಲ್ಲೆ ಅತಿ ಹೆಚ್ಚು 6 ಸಾವಿರ ರೂ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈ ಭಾಗದ ರೈತರ ಬೇಡಿಕೆಗಳಿಗೆ ಅನಕೂಲವಾಗಲಿದೆ
ಎಂದರು.
ಇಂದಿನ ರಸ್ತೆಯು ಈ ಭಾಗದ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯಿಂದ ಹಲ್ಯಾಳ ಗ್ರಾಮದ ಮಡ್ಡಿಯ ಮುಖಾಂತರ ಅವರಖೋಡ, ನಾಗನೂರು ಪಿಕೆ, ಲಕ್ಷ್ಮಿ ದೇವಸ್ಥಾನದ ಮೂಲಕ ದೊಡವಾಡ ಗ್ರಾಮದ ವರೆಗೆ ಕೆಟ್ಟು ಹೋಗಿರುವ ರಸ್ತೆ ಸುಧಾರಣೆಗಾಗಿ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಮೂಲಕ 3 ಕೋಟಿ 50 ಲಕ್ಷ ರೂ.ಗಳ ಕಾಮಗಾರಿ ನಡೆಯುತ್ತಿರುವದು ಅಕ್ಕ ಪಕ್ಕದ ಗ್ರಾಮಗಳಿಂದ ತಾಲೂಕು ಕೇಂದ್ರಗಳಿಗೆ ಹೋಗಲು ಅನಕೂಲವಾಗಲಿದೆ ಅಲ್ಲದೆ ರೈತರು ಬೆಳೆದ ಕಬ್ಬು ಹಾಗೂ ಇನ್ನಿತರ ಬೆಳೆಗಳನ್ನು ಕಟಾವು ಮಾಡಿ ಕಾರಖಾನೆ ಅಥವಾ ಮಾರುಕಟ್ಟೆಗಳಿಗೆ ಸಾಗಿಸಲು ಹೆಚ್ಚಿನ ಸಹಕಾರಿಯಾಗಲಿದೆ. ಎಂದು ಹೇಳಿದರು.
ಈ ವೇಳೆ ಮುಖಂಡರಾದ ದಶರಥ ಅಂಬಿ, ಪ್ರಶಾಂತ ಅಕ್ಕೋಳ, ಅಶೋಕ ಲಡಗಿ, ಮಲ್ಲಪ್ಪ ದರೂರ, ಪಾಂಡು ನಿಕ್ಕಮ, ಮಹಾದೇವ ಬಿಳಿಕುರಿ, ಶ್ರೀಕಾಂತ ದರೂರ, ರಾಮನಗೌಡ ಪಾಟೀಲ, ಎಸ್ ಆರ್ ಘೂಳಪ್ಪನವರ, ವಿನಾಯಕ ಬಾಗಡೆ, ಪಂಚಾಯತ ರಾಜ್ ಇಲಾಖೆ ಅಭಿಯಂತರ ಈರಣ್ಣ ವಾಲಿ, ಗುತ್ತಿಗೆದಾರ ಎಸ್ ಎಸ್ ಮದಣ್ಣವರ ಸೇರಿದಂತೆ ಗ್ರಾಮಸ್ಥರು ಅನೇಕ ಗಣ್ಯರು ಉಪಸ್ಥಿತರಿದ್ದರು.