ತಾಲೂಕಿನ ಕೋಡಿಹಳ್ಳಿ- ಮಳೆ ಗಾಳಿಗೆ ಹಾರಿದ ಮನೆ ಚಾವಣೆ ಸೀಟುಗಳು

ಸಂಡೂರು :ಮಾ: 30: ಇತ್ತೀಚೆಗೆ ತಾಲೂಕಿನ ಬಂಡ್ರಿ ಹತ್ತಿರದ ಕೋಡಿ ಹಳ್ಳಿ ಗ್ರಾಮದಲ್ಲಿ ಮಳೆಗಿಂತಲೂ ಹೆಚ್ಚು ಗಾಳಿಯ ಹೊಡೆತಕ್ಕೆ ಬಡ ಕುಟುಂಬಗಳ ರೈತರ ಚಾವಣಿಗಳು ಹಾರಿಹೋಗಿದ್ದು ರೈತರು ಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಗ್ಗೆ ರೈತರಾದ ಚನ್ನಬಸಪ್ಪ ಬಂಡ್ರಿ ಇವರು ಪ್ರತಿಕ್ರಿಯಿಸಿ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಮಳೆ ಬಂತು ಎಂದು ಮನೆಗೆ ಬಂದೆವು ಅದರೆ ಇಡೀ ಮನೆಯ ಚಾವಣಿಯೆ ಗಾಳಿಗೆ ಹಾರಿಹೋದ ಪರಿಣಾಮ ದಿಕ್ಕು ತೋಚದಂತಾಯಿತು, ಕಾರಣ ಸಾಲ ಶೂಲಮಾಡಿ ಛಾವಣಿಗೆ ತಗಡಿನ ಸೀಟು ಹಾಕಿಸಿಕೊಂಡು ಬದುಕನ್ನು ನೂಕುತ್ತಿದ್ದೇವು, ಅದರೆ ಈಗ ಏಕಾ ಏಕಿ ಛಾವಣಿ ಹಾರಿದ ಪರಿಣಾಮ ಬಯಲಲ್ಲಿ ಬದುಕನ್ನು ಸಾಗಿಸುವಂತಹ ಸ್ಥಿತಿ ಉಂಟಾಗಿದೆ, ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ, ತಹಶೀಲ್ದಾರ್ ಗಮನಕ್ಕೆ ತರಲಾಗುವುದು ಎಂದರು.