ತಾಲೂಕಿನ ಕೆ.ಸಿ.ನಾರಾಯಣಗೌಡ ಮಿಂಚಿನ ಸಂಚಾರ

ಕೆ.ಆರ್.ಪೇಟೆ. ಏ.28:- ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರವಳ್ಳಿ, ಮಂದಗೆರೆ ಮತ್ತು ಕಸಬಾ ಹೋಬಳಿಯ ಹರಿಹರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ಕೆ.ಸಿ.ನಾರಾಯಣಗೌಡ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದರು.
ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಅಕ್ಕಿಹೆಬ್ಬಾಳು ಹೋಬಳಿಯ ಬೀರವಳ್ಳಿ ಮತ್ತು ಮಂದಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೀರವಳ್ಳಿ, ಗುಬ್ಬಹಳ್ಳಿ, ಚೌಡಸಮುದ್ರ, ಮೂಡನಹಳ್ಳಿ, ಆಲೇನಹಳ್ಳಿ, ಹೊನ್ನೇನಹಳ್ಳಿ, ಮಂದಗರೆ, ಬೇವಿನಹಳ್ಳಿ ಮುಂತಾದ ಗ್ರಾಮಗಳಲ್ಲಿ ಬುಧವಾರ ರಾತ್ರಿ ಪ್ರಚಾರ ಯಾತ್ರೆ ನಡೆಸಿದರು. ಗುರುವಾರ ಬೆಳಿಗ್ಗೆ ಕಸಬಾ ಹೋಬಳಿಯ ಹರಿಹರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರ್ನೇನಹಳ್ಳಿ, ಹರಿಹರಪುರ, ಬೊಮ್ಮೇನಹಳ್ಳಿ, ಕೊಮ್ಮೇನಹಳ್ಳಿ, ಕತ್ತರಘಟ್ಟ, ಗೋವಿಂದೇಗೌಡನ ಕೊಪ್ಪಲು ಮತ್ತು ಬಿಲ್ಲರಾಮನಹಳ್ಳಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಕೆ.ಸಿ.ನಾರಾಯಣಗೌಡ ಮತಯಾಚನೆ ಮಾಡಿದರು.
ಜನಾರ್ಶೀವಾದ ಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಸಿ.ನಾರಾಯಣಗೌಡ ರಾಜ್ಯದ ಜನರಿಗೆ ಬಿಜೆಪಿಯೇ ಭರವಸೆಯಾದರೆ ಕ್ಷೇತ್ರದ ಅಭಿವೃದ್ದಿಗೆ ನಾನೇ ಭರವಸೆ ಎಂದರು. ನಾನು ಜೆಡಿಎಸ್ ಪಕ್ಷದ ಶಾಸಕನಾಗಿದ್ದಾಗ ಕ್ಷೇತ್ರದ ಅಭಿವೃದ್ದಿಗೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ.
ಕ್ಷೇತ್ರದ ಅಭಿವೃದ್ದಿ ಮತ್ತು ತಾಲೂಕಿನ ಮಣ್ಣಿನ ಮಗ ಬೂಕನಕೆರೆ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜ್ಯ ಮುಖ್ಯಂತ್ರಿಯನ್ನಾಗಿಸಬೇಕೆನ್ನುವ ಸದುದ್ದೇಶದಿಂದ ಜೆಡಿಎಸ್ ಪಕ್ಷದ ಶಾಸಕ ಸ್ಥಾನವನ್ನು ತ್ಯಜಿಸಿ ಬಿಜೆಪಿ ಸೇರಿದೆ. ಕಳೆದ ಉಪ ಚುನಾವಣೆಯಲ್ಲಿ ನೀವೆಲ್ಲಾ ನನ್ನ ಕೈಹಿಡಿದು ಮುನ್ನಡೆಸಿದ ಪರಿಣಾಮ ಕಮಲವೇ ಅರಳದ ಮಂಡ್ಯ ಜಿಲ್ಲೆಯಲ್ಲಿ ಮೊಟ್ಟ ಮೊದಲಭಾರಿಗೆ ಬಿಜೆಪಿ ಪಕ್ಷದ ಶಾಸಕನಾಗಿ ಮತ್ತು ಸಚಿವನಾಗಿ ಕೆಲಸ ಮಾಡುವ ಅವಕಾಶ ನನ್ನದಾಗಿದೆ. ಸಚಿವನಾಗಿ ನಾನು ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ದಿಗೆ ದುಡಿದಿದ್ದೇನೆ.
ಕಟ್ಟಹಳ್ಳಿ, ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ಮೂಲಕ ತಾಲೂಕಿನ ಬರಪೀಡಿತ ಸಂತೇಬಾಚಹಳ್ಳಿ ಮತ್ತು ಶೀಳನೆರೆ ಹೋಬಳಿಯ ಸಮಗ್ರ ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸುವವ ಕಾರ್ಯ ಮಾಡಿದ್ದೇನೆ. ಅಕ್ಕಿಹೆಬ್ಬಾಳು ಹೋಬಳಿಯ 11 ಕೆರೆಗಳನ್ನು ಹಾರಂಗಿ ನೀರಿನಿಂದ ತುಂಬಿಸುವ ಕೆಲಸಕ್ಕೆ ಚಾಲನೆ ನಿಡಿದ್ದೇನೆ. ಹೊಸಹೊಳಲು ಚಿಕ್ಕಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.
ಪಟ್ಟಣದಲ್ಲಿ ತಾಯಿ ಮಗು ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ದೊರಕಿದೆ. ಒಳಾಂಗಣ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕಾಗಿ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ಐಟೆಕ್ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಕುಂಭ ಮೇಳ, ಆರೋಗ್ಯ ಮೇಳ, ಉದ್ಯೋಗ ಮೇಳಗಳನ್ನು ಸಂಘಟಿಸಿ ಧಾರ್ಮಿಕ, ಐದ್ಯೋಗಿಕ ಮತ್ತು ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿದ್ದೇನೆ. ಮತ್ತೊಮ್ಮೆ ನನಗೆ ಅಧಿಕಾರ ಕೊಟ್ಟರೆ ನನ್ನ ಕನಸಿನ ಅಭಿವೃದ್ದಿ ಕಾರ್ಯಗಳನ್ನು ಪೂರ್ಣಗೊಳಿಸಿ ಕ್ಷೇತ್ರದ ಜನರ ಆರ್ಥಿಕ ಪ್ರಗತಿಗೆ ಶಕ್ತಿ ತುಂಬುತ್ತೇನೆಂದ ನಾರಾಯಣಗೌಡ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕ್ಷೇತ್ರದ ಜನ ವಿರೋಧಿಗಳ ಟೀಕೆ ಟಿಪ್ಪಣಿಗಳಿಗೆ ಗಮನ ನೀಡದೆ ಅಭಿವೃದ್ದಿಗಾಗಿ ಬಿಜೆಪಿಗೆ ಮತಹಾಕುವಂತೆ ಮನವಿ ಮಾಡಿದರು.
ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಬಾ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್, ಮನ್ ಮುಲ್ಲ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ಬೀರವಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಎನ್.ಕುಮಾರ್, ಬೇವಿನಹಳ್ಳಿ ರವಿ, ಮೂಡನಹಳ್ಳಿ ಆನಂದ, ರೈಸ್ ಮಿಲ್ ಕೃಷ್ಣೇಗೌಡ, ಶಾಮಿಯಾನ ಸತೀಶ್, ಶೋಬಿತ್, ಚಂದ್ರಪ್ಪ, ರವಿ, ಮಲ್ಲೇಶ್, ನಾಗರಾಜು, ಹರಿಹರಪುರ ಹರಿಶ್ಚಂದ್ರ, ಬೊಮ್ಮೇನಳ್ಳಿ ಹರ್ಷ, ಬಲರಾಮೇಗೌಡ ಸೇರತಿದಂತೆ ಹಲವರು ಪ್ರಚಾರದಲ್ಲಿದ್ದರು