ತಾಲೂಕಿನ ಕಾಂಗ್ರೇಸ್ಸಿನಲ್ಲಿ ಇನ್ನೂ ಮುಂದೆ ನಾನೇ ಹೈಕಮಾಂಡ್


ದೇವದುರ್ಗ,ಏ.೨೧- ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಂಪ್ರದಾಯಿಕ ಸುಮಾರು ೪೦ಸಾವಿರ ಮತಗಳಿವೆ. ನಮ್ಮ ಕುಟುಂಬದ ಮೇಲಿನ ಅಭಿಮಾನಕ್ಕೆ ಸುಮಾರು ೨೦ ಸಾವಿರ ಮತಗಳಿದ್ದು, ಉತ್ತಮ ಪೈಪೋಟಿ ನೀಡಿ ಅಭ್ಯರ್ಥಿ ಶ್ರೀದೇವಿ ನಾಯಕ ಗೆಲವು ಶತಸಿದ್ಧ. .ಫಲಿತಾಂಶದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಮುಖಂಡರಿಗೆ ತಕ್ಕ ಉತ್ತರ ನೀಡುವೆ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ವಿ.ನಾಯಕ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಕುರಿತು ಉಹಾಪೋಹಗಳನ್ನು ಸೃಷ್ಠಿಸಲಾಗಿತ್ತು. ಪತ್ನಿ ಶ್ರೀದೇವಿ ನಾಯಕ ಮಾತ್ರ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು.ಆದರೂ ಗಾಳಿ ಮಾತುಗಳು ಕೇಳಿಬಂದವು.
ಸಹೋದರ ಬಿ.ವಿ.ನಾಯಕ ಯಾವುದೋ ಕಾರಣಕ್ಕೆ ಬಿಜೆಪಿಗೆ ಹೋಗಿದ್ದಾರೋ ಗೊತ್ತಿಲ್ಲ.ಆದರೆ ನಾನಾಗಲಿ,ನನ್ನ ಪತ್ನಿಯಾಗಲಿ ಪಕ್ಷದ ಶಿಸ್ತಿನ ಸಿಪಾಯಿಗಳು. ಸಹೋದರ ಬಿಜೆಪಿಗೆ ಹೋಗಿರುವದು ನಮಗೇನು ಭಯವಿಲ್ಲ. ಆತನೇ ಈ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಬಂದರೂ ಜಗ್ಗುವದಿಲ್ಲ, ಬಗ್ಗುವದಿಲ್ಲ .
ತಾಲೂಕಿನಲ್ಲಿ ಕಳೆದ ೬ ತಿಂಗಳಿನಿಂದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ನಿರಂತವಾಗಿ ಗೊಂದಲ ಸೃಷ್ಠಿಸಿ, ಗೊಂದಲಮಯ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ವಿ.ನಾಯಕ ತಿಳಿಸಿದರು.
ಕಳೆದ ೪೦ ವರ್ಷಗಳಿಂದ ನಮ್ಮ ತಂದೆ ಎ.ವೆಂಕಟೇಶನಾಯಕ ಒಳ್ಳೆಯ ಸಂಸ್ಕೃತಿ ನೀಡಿ ನನ್ನನ್ನು ಬೆಳಸಿದ್ದಾರೆ.ಅವರು ಸಾಮಾಜಿಕ ನ್ಯಾಯದ ಪರ ತಮ್ಮ ರಾಜಕೀಯ ಜೀವನ ಬೆಳಸಿಕೊಂಡಿದ್ದರು.ಅದರ ಪ್ರತಿಫಲವಾಗಿ ಮಾಜಿ ಶಾಸಕ ಯಲ್ಲಪ್ಪ ಅಕ್ಕರಕಿ,ಬಸವರಾಜ ಪಾಟೀಲ್ ಇಟಗಿ, ರಾಮಣ್ಣ ಇರಬಗೇರಾ,ರೂಪಾನಿರಂಜನ ಬಳೆ ಸೇರಿದಂತೆ ಇಡೀ ರಾಯಚೂರು ಜಿಲ್ಲೆಯಲ್ಲಿ ಎಲ್ಲಾ ಸಮುದಾಯಗಳ ಅನೇಕರಿಗೆ ಸ್ಥಾನ-ಮಾನ ನೀಡಿರುವ ಉದಾಹರಣೆಗಳಿವೆ.
ತಾಲೂಕಿನಲ್ಲಿ ನಿಷ್ಠಾವಂತ, ಸ್ವಾಭಿಮಾನಿ, ಅಭಿಮಾನಿ ಕಾರ್ಯಕರ್ತರ ಪಡೆ ಇದೆ. ಒಂಟಿ ಸಲಗದಂತೆ ಹೋರಾಟ ಮಾಡುತ್ತೇನೆ. ಅದರಲ್ಲೂ ನಮ್ಮ ಕುಟುಂಬದ ಮೇಲೆ ಅನುಕಂಪದ ಅಲೆ ಇದೆ. ಕೆಲ ಮುಖಂಡರು ಪಕ್ಷ ತೊರೆದಿರಬಹುದು.ಆದರೆ ಮತದಾರರು, ಕಾರ್ಯಕರ್ತರು ನಿರಂತರವಾಗಿ ನನ್ನ ಜೊತೆಗೆ ಇದ್ದಾರೆ.ಅನೇಕ ವರ್ಷಗಳಿಂದ ನಿರಂತರ ಜನರೊಂದಿಗೆ ನಾನೇ ಇದ್ದೇನೆ.ತಂದೆ ಮತ್ತು ಸಹೋದರ ಕೇವಲ ಆಶ್ರಯ ನೀಡಿದ್ದರು.ಅವಲಂಬನೆ ಜೀವನ ಇದುವರೆಗೆ ಇತ್ತು,ಇದೀಗ ನಾನು ಸ್ವತಂತ್ರ. ನನ್ನ ನಿರ್ಧಾರವೇ ಅಂತಿಮ.
ಪಕ್ಷದಲ್ಲಿ ಯಾವುದೇ ಟಿಕೇಟ್‌ಗಾಗಿ ಲಾಬಿ ಮಾಡಿಲ್ಲ. ಆದರೂ ಹೈಕಮಾಂಡ್ ನನ್ನ ಮೇಲೆ ಗೌರವ,ಪ್ರೀತಿ,ವಿಶ್ವಾಸದಿಂದ ನನ್ನ ಪತ್ನಿಗೆ ಬಿ.ಫಾರ್ಮ ನೀಡಿದ್ದಾರೆ.ಅವರಿಗೆ ಕಳಂಕ ಬರದ ಹಾಗೇ ಚುನಾವಣೆ ಎದುರಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಉತ್ತಮ ವಾತಾವರಣವಿದ್ದು,ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಖಂಡಿತ ಬರುತ್ತೆ.
ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಂಪ್ರದಾಯಿಕ ಸುಮಾರು ೪೦ಸಾವಿರ ಮತಗಳಿವೆ. ನಮ್ಮ ಕುಟುಂಬದ ಮೇಲಿನ ಅಭಿಮಾನಕ್ಕೆ ಸುಮಾರು ೨೦ ಸಾವಿರ ಮತಗಳಿದ್ದು, ಉತ್ತಮ ಪೈಪೋಟಿ ನೀಡಿ ಅಭ್ಯರ್ಥಿ ಶ್ರೀದೇವಿ ನಾಯಕ ಗೆಲವು ಶತಸಿದ್ಧ. ಫಲಿತಾಂಶದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಮುಖಂಡರಿಗೆ ತಕ್ಕ ಉತ್ತರ ನೀಡುವೆ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ವಿ.ನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ನಗರ ಘಟಕ ಅಧ್ಯಕ್ಷ ಪ್ರಕಾಶ ಪಾಟೀಲ್ ಅಮರಾಪೂರ, ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸುಲ್, ಮುಖಂಡರಾದ ಬಾಪೂಗೌಡ ಪಾಟೀಲ್ ಹೊನ್ನಕುಣಿ ಶಂಕ್ರಪ್ಪ ಬಂಡೇಗುಡ್ಡ, ವಿರೇಶಗೌಡ ಹೂವಿನಹೆಡ್ಗಿ, ಗುಲಾಮ ಮಹಬೂಬ ಇದ್ದರು.