ತಾಲೂಕಿನಾದ್ಯಂತ ವಿಜೃಂಭಣೆಯಿಂದ ಕನಕದಾಸ ಜಯಂತಿ ಆಚರಣೆ

ಸಿಂಧನೂರು,ನ.೩೦ ನಗರದ ತಹಶಿಲ್ದಾರ ಕಛೇರಿಯಲ್ಲಿ ಸಂತ ದಾಸ ಶ್ರೇಷ್ಟ ಶ್ರೀ ಕನಕದಾಸರ ೫೩೬ ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಹಾಗೂ ಸುಕಾಲಪೇಟೆಯ ಕನಕದಾಸ ವೃತ್ತದಲ್ಲಿ ಮೂರ್ತಿಗೆ ಮಾಲರ್ಪಣೆ ಮಾಡಿ ದಾಸ ಶ್ರೇಷ್ಠ ಕನಕದಾಸರ ಚಿಂತನೆಗಳು ಸರ್ವಕಾಲಿಕ .
ತಹಶಿಲ್ದಾರ ಕಛೇರಿ :ಬಿಜೆಪಿ ಮುಖಂಡರು ಹಾಗೂ ಹಾಲುಮತ ಸಮಾಜದ ಯುವ ನಾಯಕರಾದ ಕೆ.ಕರಿಯಪ್ಪ ಮಾತನಾಡುತ್ತಾ ಮೊಟ್ಟ ಮೊದಲಿಗೆ ನಾಡಿನ ಜನತೆಗೆ ಕನಕದಾಸರ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತಾ ,ಕನಕದಾಸರು ಯಾವುದೇ ಜಾತಿ ,ಧರ್ಮಕ್ಕೆ ಸಿಮಿತವಲ್ಲ ,ವಿಶ್ವ ಮಾನವ ಪರಿಕಲ್ಪನೆ ಯನ್ನು ಸಂದೇಶಗಳನ್ನು ಬಿತ್ತಿದ್ದಾರೆ ಅವರ ಆದರ್ಶಗಳು ಇಂದಿಗೂ ಆದರ್ಶಮಯ .ಪ್ರಸ್ತುತ ಕಾಲಮಾನದಲ್ಲಿ ಅವರ ತತ್ವಗಳು, ಚಿಂತನೆಗಳು ದಾರಿದೀಪವಾಗಿವೆಂದು ತಿಳಿಸಿದರು.
ಕನಕದಾಸ ವೃತ್ತ : ನಗರದ ಸುಕಾಲಪೇಟೆಯ ಕನಕದಾಸ ವೃತ್ತದಲ್ಲಿ ಮೂರ್ತಿಗೆ ಪೂಜೆಗೈದು ,ಮಾಲಾರ್ಪಣೆ ಮಾಡಿದರು.
ಜಯಂತಿ ಯಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಮಾಜಿ ಸಂಸದರು ,ಹಾಲುಮತ ಸಮಾಜದ ಹಿರಿಯರಾದ ಕೆ.ವಿರುಪಾಕ್ಷಪ್ಪ ,ಬಸವರಾಜ ನಾಡಗೌಡ ,ಅಮರೇಗೌಡ ವಿರುಪಾಪುರ ,ಡಿ ನಾಗವೇಣಿ ಪಾಟೀಲ್ ,ಎಚ್.ಡನ್ ಬಡಿಗೇರ ,ಎಂ.ದೊಡ್ಡ ಬಸವರಾಜ ,ಅಮರೇಶ ಗುರಿಕಾರ ,ಕುರುಬರ ಸಮಾಜದ ತಾಲೂಕ ಅದ್ಯಕ್ಷ ವಿ.ಬಸವರಾಜ ,ಅಮರೇಶಪ್ಪ ಮೈಲಾಪುರ ,ತಹಶಿಲ್ದಾರ ಅರುಣ್ ಕುಮಾರ್ ದೇಸಾಯಿ ,ಪೌರಾಯುಕ್ತ ಮಂಜುನಾಥ ಗುಂಡೂರು ,ಡಿವಾಯ್‌ಎಸ್ಪಿ ಬಿ.ಎಸ್ ತಳವಾರ ,ರಾಯಪ್ಪ ವಕೀಲರು ,ಲಿಂಗರಾಜ ಹೊಸಳ್ಳಿ ,ಚಂದ್ರಶೇಖರ ಹಿರೇಮಠ ,ಯಂಕೋಬ ರಾಮತ್ನಾಳ ,ಪರಮೇಶಪ್ಪ ಆದಿಮನಿ,ಜಡಿಯಪ್ಪ ವಕೀಲರು,ಯುವ ಮುಖಂಡರಾದ ಕಿಚ್ಚಾ ಸುರೇಶ ,ಸುರೇಶ ಸಿದ್ದಾಪುರ ,ಶಂಬಣ್ಣ ಸುಕಾಲಪೇಟೆ ,ನಾಗರಾಜ ಬಾದರ್ಲಿ ,ಟಿ.ಶಿವು ,ಶಿವು ಬಿಂಗಿ ,ಗಂಗಣ್ಣ ಡಿಶ್ ,ವಿರೇಶ ಮಲ್ಕಾಪುರ ,ದೌಲಸಾಬ ದೊಡ್ಮನಿ ,ಮೌನೇಶ ದೊರೆ ,ಶರಣಬಸವ ಮಲ್ಲಾಪುರ ಸೇರಿದಂತೆ ಅನೇಕರು ಜಯಂತಿ ಯಲ್ಲಿ ಪಾಲ್ಗೊಂಡಿದ್ದರು.
ತುರವಿಹಾಳ : ತಾಲೂಕಿನ ತುರವಿಹಾಳ ಪಟ್ಟಣದಲ್ಲಿನ ಶ್ರೀ ಅಮೋಘ ರೇವಣಸಿದ್ದೇಶ್ವರ ಮಠದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನಗೈದು ಭಾವಚಿತ್ರ ಮೆರವಣಿಗೆ ಯನ್ನು ಶ್ರೀ ಮಠದಿಂದ ಪಟ್ಟಣದಲ್ಲಿನ ಕನಕದಾಸ ವೃತ್ತದ ವರೆಗೆ ಡೊಳ್ಳು ಬಾರಿಸುವ ಮೂಲಕ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡುತ್ತಾ ಊರಿನ ಪ್ರಮುಖ ಗಣ್ಯರಾದ ಮಲ್ಲನಗೌಡ ಮಾದಯ್ಯ ಗುರುವಿನ್ ,ಚಿದಾನಂದಯ್ಯ ಗುರುವಿನ್ ,ಗುಂಡಯ್ಯ ಅಪ್ಪಾಜಿ ,ಮಲ್ಲನಗೌಡ ದೇವರಮನಿ ,ಪಾರುಖ್ ಸಾಬ ,ಮೌಲಪ್ಪಯ್ಯ ,ಕರಕಪ್ಪ ಸಾಹುಕಾರ ,ರುದ್ರ ಸ್ವಾಮಿ, ನಿಂಗಪ್ಪ ಕಟ್ಟಿಮನಿ ,ಲಿಂಗಪ್ಪ ಸಾನಬಾಳ,ಆರ್.
ಶಿವಪ್ಪ , ಬಾಲಪ್ಪ ಕುಂಟೋಜಿ ,ಶರಣಪ್ಪ ಹೋಸಗೌಡ್ರ ,ಅಬುತುರಾಬ್ ,ಪಕೀರಪ್ಪ ಬಂಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.