ತಾಲೂಕಿನಾದ್ಯಂತ ಬಿಜೆಪಿ ಸಂಭ್ರಮಾಚರಣೆ

ಹುಮನಾಬಾದ್:ಮೇ.14: ಕೇತ್ರದಲ್ಲಿ ಬಿಜೆಪಿಯ ಡಾ. ಸಿದ್ದು ಪಾಟೀಲ್ ಗೆಲುವಿನ ಹಿನ್ನಲೆ ಶನಿವಾರ ಹುಮನಾಬಾದ್ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಸಹೋದರರ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಡಾ. ಸಿದ್ದು ಪಾಟೀಲ್ 1460 ಮತಗಳ ಅಂತರದ ಗೆಲುವಿನ ಫಲಿತಾಂಶ ಹೊರಬಿಳುತ್ತಿದ್ದಂತೆ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಡಾ. ಸಿದ್ದು ಪಾಟೀಲ್ ಅವರ ಗೃಹ ಕಚೇರಿಯ ಮುಂಬಾಗದಲ್ಲಿ ನೆರದು ಸಿದ್ದು ಪಾಟೀಲ್ ಗೆ ಜಯವಾಗಲಿ ಎಂದು ಕೂಗುವ ಮೂಲಕ ಸಂಭ್ರಮಿಸಿದರು.

ಬಳಿಕ ಡಾ. ಸಿದ್ದು ಪಾಟೀಲ್ ತಮ್ಮ ಬೆಂಬಲಿಗರೊಂದಿ ಬೀದರ ನಗರಕ್ಕೆ ತೆರಳಿ ಭಗವಂತ ಖೂಬಾಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಬೀದರ ನಗರದಿಂದ ಬರುತ್ತಿದಂತೆ ಹುಮನಾಬಾದ್ ಕ್ಷೇತ್ರದ ಹಳ್ಳಿಖೇಡ (ಬಿ), ಕಬೀರಾಬಾದ್, ದುಬಲಗುಂಡಿ, ಜಲಸಿಂಗಿ, ಧುಮ್ಮನಸೂರ ಗ್ರಾಮಗಳು ಸೇರಿದಂತೆ ಹುಮನಾಬಾದ್ ಪಟ್ಟಣದ ಜಹೀರಪೇಟ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತದಾರರಿಗೆ ಧನ್ಯವಾದಗಳು ತಿಳಿಸಿದರು.

ಮುಖಂಡರಾದ ಸುಭಾಷ ಕಲ್ಲೂರ್, ಗಿರೀಶ್ ತುಂಬಾ, ನಾಗಭೂಷಣ ಸಂಗಮ, ಪರಮೇಶ್ವರ ಕಾಳಮಂದರ್ಗಿ, ಶ್ರೀರಂಗ ಭೋಲಾ, ಶ್ರೀಕಾಂತ ಬಾವಿದೊಡ್ಡಿ, ಸುಶೀಲಕುಮಾರ ಮರಪಳ್ಳಿ, ಶ್ರೀನಾಥ ದೇವಣಿ, ಸುನಿಲ್ ಪತ್ರಿ, ವಿನಾಯಕ ಮಣಕೋಜಿ ಸೇರಿ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.