ತಾಲೂಕಿನಾದ್ಯಂತ ದೀಪಾವಳಿ ಆಚರಣೆ

ಗಂಗಾವತಿ ನ 15 : ನಗರ ಸೇರಿ ತಾಲೂಕಿನಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶನಿವಾರ ರಾತ್ರಿ 7ರಿಂದ ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮತ್ತಷ್ಟು ಕಳೆಗಟ್ಟಿತು.
ಚಿಕ್ಕ ಮಕ್ಕಳು ಸೇರಿದಂತೆ ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಸಿದರು. ಆಕಾಶದಲ್ಲಿ ವರ್ಣರಜಿತ ಪಟಾಕಿಗಳು ಆಕರ್ಷಿಸಿದವು.
ಅಲ್ಲದೇ, ಕೆಲ ಅಂಗಡಿಗಳಲ್ಲಿ ವಿಶೇಷವಾಗಿ ಅಲಂಕಾರ ಮಾಡಿದ್ದ ಆಕಾಶಬುಟ್ಟಿ, ವಿದ್ಯುತ್ ದೀಪಗಳು ನೋಡುಗರ ಗಮನ ಸೆಳೆದವು.
ಇನ್ನೂ ಮನೆ ಮನೆಯ ಬಾಗಿಲು ಮುಂದೆ ಮಣ್ಣಿನ ದೀಪಗಳು, ಪಿಗಾಣಿ ದೀಪಗಳು ಹಚ್ಚಿ ದೀಪಾವಳಿ ಆಚರಿಸಿದರು. ಅಲ್ಲದೇ, ಮನೆ ಮುಂದೆ ಹಾಕಿದ್ದ ಚಿತ್ತಾರದ ರಂಗೋಲಿ ಸಹ ಆಕರ್ಷಿಸಿದವು.
ಸರ್ಕಾರ ಹಸಿರು ಪಟಾಕಿ ಹಚ್ಚಿ ದೀಪಾವಳಿ ಆಚರಿಸುವಂತೆ ಮನವಿ ಮಾಡಿತ್ತು. ಆದರೆ, ನಗರದಲ್ಲಿ ಕೆಲ ಕಡೆ ಹಸಿರು ಪಟಾಕಿ ಹಚ್ಚಿದರೆ, ವಿವಿಧೆಡೆ ರಾಸಾಯನಿಕ ಮಿಶ್ರಿತ ಪಟಾಕಿ ಬಳಕೆ ಸಾಮಾನ್ಯವಾಗಿತ್ತು. ಇದರಿಂದ ಬಹೃತ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಉಂಟಾಯಿತು.