ತಾಲೂಕಿನಾದ್ಯಂತ ಉತ್ಸಾಹದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಭಾಲ್ಕಿ:ಎ.1: ತಾಲೂಕಿನಾದ್ಯಂತ ಇರುವ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ನಡೆದ ಪ್ರಥಮ ಭಾಷೆ ಪರೀಕ್ಷೆಯನ್ನು ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಬರೆದರು. ಪ್ರಥಮ ಭಾಷೆ ಕನ್ನಡ, ಮರಾಠಿ, ಉರ್ದು, ಇಂಗ್ಲೀಷ ವಿಷಯಗಳನ್ನು ಆಯಾ ಮಾಧ್ಯಮದ ವಿದ್ಯಾರ್ಥಿಗಳು ಸುಸೂತ್ರವಾಗಿ ಉತ್ತತರಿಸಿದರು. ಯಾವುದೇ ತರಹದ ಅಹಿತಕರ ಘಟನೆ ನಡೆದ ಬಗ್ಗೆ ತಿಳಿದು ಬಂದಿಲ್ಲ. ನೂತನವಾಗಿ ನೊಂದಾಯಿತವಾದ ಒಟ್ಟು 4099 ವಿದ್ಯಾರ್ಧಿಗಳಲ್ಲಿ 4012 ವಿದ್ಯಾರ್ಥಿಗಳು ಹಾಜರಾಗಿದ್ದು, ಪುನರಾವರ್ತಿತ 24 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಹಾಜರಾಗಿದ್ದು, ಒಟ್ಟು ನೂತನ ನೊಂದಯಿತ 4032 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಂತೆಯೆ ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿತರಾದ 222 ವಿದ್ಯಾರ್ಥಿಗಳಲ್ಲಿ 167 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಿನಲ್ಲಿ ಪರೀಕ್ಷೆಗೆ ನೊಂದಯಿತರಾದ 4321 ವಿದ್ಯಾರ್ಥಿಗಳಲ್ಲಿ 4199 ವಿದ್ಯಾರ್ಥಿಳು ಪರೀಕ್ಷೆ ಬರೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ತಾಲೂಕಿನಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳಿವೆ. ಮುಖ್ಯ ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಪ್ರೌಢಶಾಲೆ ಭಾಲ್ಕಿ, ಸರ್ಕಾರಿ ಪ್ರೌಢಶಾಲೆ ಖಟಕ ಚಿಂಚೋಳಿ, ನಿಟ್ಟೂರ(ಬಿ), ಭಾತಂಬ್ರಾ, ಮೆಹಕರ, ಕಣಜಿ, ಲಖಣಗಾಂವ, ಕರ್ನಾಟಕ ಪಬ್ಲಿಕ್ ಶಾಲೆ ಹಲಬರ್ಗಾ, ಸತ್ಯನಿಕೇತನ ಪ್ರೌಢಶಾಲೆ ಭಾಲ್ಕಿ, ಶಿವಾಜಿ ಪ್ರೌಢಶಾಲೆ ಭಾಲ್ಕಿ, ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿ, ಶ್ರೀ ಚನ್ನಬಸವೇಶ್ವರ ಗುರುಕುಲ ಕರಡ್ಯಾಳ, ನವಕಿರಣ ಪ್ರೌಢಶಾಲೆ ಅಂಬೆಸಾಂಗವಿ, ಸಂಗಮೇಶ್ವರ ಪ್ರೌಢಶಾಲೆ ಕೇಸರಜವಳಗಾ, ಭಾರತ ಪಬ್ಲಿಕ್ ಪ್ರೌಢಶಾಲೆ ಭಾಲ್ಕಿ, ಸಂಗಮೇಶ್ವರ ಪ್ರೌಢಶಾಲೆ ಭಾಲ್ಕಿ ಸೇರಿದಂತೆ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರವಾದ ಶ್ರೀ ಸತ್ಯಸಾಯಿ ಪ್ರೌಢಶಾಲೆ ಭಾಲ್ಕಿಯಲ್ಲಿ ಪರೀಕ್ಷೆಗಳು ನಡೆಯುತ್ತಲಿವೆ.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಪರೀಕ್ಷಾ ಮುಖ್ಯ ಅಧೀಕಕ್ಷ ಸೇರಿದಂತೆ ಸ್ಥಾನಿಕ ಜಾಗೃತ ದಳ, ಪ್ರಶ್ನೆಪತ್ರಿಕೆಯ ಪಾಲಕ, ಕೊಠಡಿ ಮೇಲ್ವಿಚಾರಕರು, ಪೊಲೀಸ್ ಸಿಬ್ಬಂದಿ ಸೇರಿದಂತೆ ನೂರಾರು ಅಧಿಕಾರಿಗಳು ಕಾರ್ಯ ನಿರ್ವಹಿಸಿದರು. ಪರೀಕ್ಷೆಯ ಹೊರಗಡೆಯಿಂದ ಯಾವುದೇ ತರಹದ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಸಿಬ್ಬಂದಿಯವರು ವ್ಯಾಪಕ ಬಂದೋಬಸ್ಥ ವದಗಿಸಿದರು. ಪ್ರಥಮ ದಿನವಾದ ಶುಕ್ರವಾರ ವಿದ್ಯಾರ್ಥಿಗಳು ತಮ್ಮ ಕೊಠಡಿಯನ್ನು ಹುಡುಕಿಕೊಳ್ಳುವಲ್ಲಿ ಪರಿಶ್ರಮ ಪಟ್ಟರು. ಒಟ್ಟಿನಲ್ಲಿ ಶುಕ್ರವಾರ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ ಸುಸೂತ್ರವಾಗಿ ನಡೆದ ಬಗ್ಗೆ ತಿಳಿದುಬಂದಿದೆ.