ತಾಲೂಕಿನಲ್ಲಿ ಸ್ವಲ್ಪ ತಗ್ಗಿದ ಕೊರೊನಾ ಕೇಂದ್ರ ಬಸ್‌ನಿಲ್ದಾಣ ಸೀಲ್‌ಡೌನ್

ದೇವದುರ್ಗ.ಮೇ.೧೮-ಕೊರೊನಾ ಎರಡನೇ ಅಲೆಯ ಆಟ ಮುಂದುವರಿದಿದ್ದು, ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಅತಿಹೆಚ್ಚು ಪಾಸಿಟಿವ್ ಕೇಸ್‌ಗಳು ಪತ್ತೆಯಾಗುತ್ತಿವೆ. ಮಂಗಳವಾರ ಸೋಂಕು ಸ್ವಲ್ಪ ತಗ್ಗಿದ್ದು, ಪ್ರಕರಣಗಳು ತೀವ್ರ ಕಡಿಮೇಯಾಗಿವೆ.
ಕಳದ ಕೆಲವು ವಾರದಿಂದ ನಿತ್ಯ ನೂರಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿದ್ದವು. ಸೋ ಮವಾರ ಹಾಗೂ ಮಂಗಳವಾರ ಕೇವಲ ಕೇಸ್ ಪತ್ತೆಯಾಗಿವೆ. ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.
ಕಳದ ಕೆಲವು ದಿನಗಳಿಂದ ಸೋಂಕಿತರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಕಿರಿಯ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಜವಾಬ್ದಾರಿ ವಹಿಸಲಾಗಿದೆ. ಆಶಾ ಕಾರ್ಯಕರ್ತೆಯರು ಸೋಂಕಿತರ ಮನೆಗೆ ದಿನಕ್ಕೊಮ್ಮೆ ಭೇಟಿ ನೀಡಿ, ಅಗತ್ಯ ಮಾತ್ರೆ ತೆಗೆದುಕೊಳ್ಳುವ ಜತೆಗೆ ಕೆಲ ಪಾಲಿಸಬೇಕಾದ ನಿಯಮಗಳನ್ನು ಹೇಳುತ್ತಿದ್ದಾರೆ. ಆಶಾ ಕಾರ್ಯಕರ್ತೆಯರೇ ಸೋಂಕಿತರಿಗೆ ಆಸರೆಯಾಗಿದ್ದಾರೆ.
ಸೀಲ್‌ಡೌನ್:
ಕೊರೊನಾ ತಡೆಗೆ ಸರ್ಕಾರ ಮೇ ೨೪ರವಗೆ ಲಾಕ್‌ಡೌನ್ ಜಾರಿಮಾಡಿದ್ದರಿಂದ ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ಬಂದ್ ಆಗಿದೆ. ಹೀಗಾಗಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಸೇರಿ ಖಾಸಗಿ ವಾಹನಗಳು ಬಾರದಂತೆ ಸೀಲ್‌ಡೌನ್ ಮಾಡಲಾಗಿದೆ. ಎರಡೂ ಗೇಟ್‌ಗಳನ್ನು ಬಂದ್ ಮಾಡಿದ್ದು, ಯಾವುದೇ ವಾಹನ ಹೋಗದಂತೆ ತಡೆಯಲಾಗಿದೆ. ಇದಕ್ಕೂ ಮುನ್ನ ಬಸ್ ನಿಲ್ಲುವ ಜಾಗ ಸೇರಿ ಎಲ್ಲೆಂದರಲ್ಲಿ ಖಾಸಗಿ ವಾಹನಗಳು ನಿಲ್ಲುತ್ತಿದ್ದು, ಅನಗತ್ಯ ಸಂಚಾರ, ಗಲಾಟೆ, ಎಲ್ಲೆಂದರಲ್ಲಿ ಕಸ ಬಿಸಾಡುವುದು ಕಂಡುಬರುತ್ತಿತು. ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್ ನಿಲ್ದಾಣ ಸೀಲ್‌ಡೌನ್ ಮಾಡಿದ್ದಾರೆ.

ಕೋಟ್======
ಲಾಕ್‌ಡೌನ್ ಇರುವ ಕಾರಣ ಬಸ್ ಸಂಚಾರವಿಲ್ಲ. ಹೀಗಾಗಿ ಖಾಸಗಿ ವಾಹನಗಳ ಓಡಾಟ ಹೆಚ್ಚಾಗಿತ್ತು. ಇದರ ನಿಯಂತ್ರಣಕ್ಕೆ ಬಸ್‌ನಿಲ್ದಾಣದ ಎರಡೂ ಗೇಟ್ ಬಂದ್ ಮಾಡಲಾಗಿದೆ. ಇದರಿಂದ ಜನರ ನಿಯಂತ್ರಣ ಜತೆಗೆ ನಿಲ್ದಾಣ ಸ್ವಚ್ಛವಾಗಿ ಇರಿಸಿಕೊಳ್ಳಬಹುದು.
| ಸಿದ್ದಪ್ಪ
ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ