ತಾಲೂಕಿನಲ್ಲಿ ಶೇಕಡ 83.53 ಮತದಾನ

ಹಗರಿಬೊಮ್ಮನಹಳ್ಳಿ .ಡಿ.೨೮ ತಾಲೂಕಿನ 19 ಗ್ರಾಮ ಪಂಚಾಯಿತಿಗೆ ಭಾನುವಾರ ಮತದಾನ ನಡೆಯಿತು. ಒಟ್ಟು 338 ಸ್ಥಾನಗಳ ಪೈಕಿ 47 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿ ಉಳಿದ 291 ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಶೇ 83.53 ರಷ್ಟು ಮತದಾನ ಜರಗಿದೆ.
ಮತದಾನ ಪ್ರಕ್ರಿಯೆಯಲ್ಲಿ 698 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಕೆಲವು ಗ್ರಾಮಗಳಲ್ಲಿ ಜನ ಜಾತ್ರೆಯಂತೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತ ಮತದಾನವಾಗಿದೆ ಎಂದು ಸಿಪಿಐ ಮಲ್ಲಿಕಾರ್ಜುನ್ ಡಪ್ಪಿನ್ ತಿಳಿಸಿದರು. ಕೆಲವು ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಗ್ರಾಮಗಳಲ್ಲಿ ಚುನಾವಣೆಯ ಕಾವು ಕಂಡುಬರಲಿಲ್ಲ.
ನಂದಿಪುರ ಗ್ರಾಮದ ಮತಗಟ್ಟೆಯಲ್ಲಿ ವೃದ್ಧೆ ಕಾಗಿ ಲಕ್ಷ್ಮವ್ವ ಮತ ಚಲಾಯಿಸಿದರು. ಆರೋಗ್ಯ ಸಹಾಯಕ ವಿಜಯ ಮಹಾಂತೇಶ ಗೌಡ, ಆಶಾಕಾರ್ಯಕರ್ತೆ ವೈ.ಹಾಲಮ್ಮ, ಗ್ರಾ.ಪಂ.ಡಿ.ಗ್ರೂಪಿನ ಬಿ.ಬಸವರಾಜ ಇದ್ದರು.