ತಾಲೂಕಿನಲ್ಲಿ ಮಳೆ ಅಬ್ಬರಕ್ಕೆ ಫಸಲು ನಾಶ

ಹನೂರು ಮೇ.22:- ತಾಲೂಕಿನ ಮಂಗಲ ಗ್ರಾಮದ ಎಂ.ಎಲ್ ರಾಮಚಂದ್ರ ಮತ್ತು ಸಹೋದರರಾದ ಎಂಎಲ್. ಪ್ರಕಾಶ್ ರವರಿಗೆ ಸೇರಿದ ಕನಿಷ್ಠ 70 ಎಕರೆ ಜಮೀನಿನಲ್ಲಿ ಪಪ್ಪಾಯಿ ಮತ್ತು ಹಲೋಪಿನ ಮೆಣಸಿನ ಸಸಿಗಳು ಗುಡುಗು ಮಿಂಚು ಮಳೆ ಅಬ್ಬರದಿಂದ ಸಂಂಪೂರ್ಣ ಸಸಿಗಳು ಹಾನಿಯಾಗಿ ನಾಶವಾಗಿದೆ.
ಕಳೆದ 3 ತಿಂಗಳ ಹಿಂದೆ ನಾಟಿ ಮಾಡಿದ್ದ 25 ಎಕರೆ ಪಪ್ಪಾಯಿ ಬೆಳೆ ಬಿರುಗಾಳಿ ಸಹಿತ ಆಲಿಕಲ್ಲಿನ ಮಳೆಗೆ ಸಂಪೂರ್ಣ ಪಪ್ಪಾಯಿ ನೆಲಕಚ್ಚಿದೆ. ಜೊತೆಗೆ 45 ಎಕರೆಯ ಜಮೀನನ್ನು ಉಳಿಮೆ ಮಾಡಿ ನಾಟಿ ಮಾಡಲು ತಯಾರು ಮಾಡಿಕೊಂಡಿದ್ದ ಒಪ್ಪಂದ ಕೃಷಿ ಅಡಿಯಲ್ಲಿ ಬೆಳೆದಿದ್ದ 5 ಲಕ್ಷ ಹಲೋಪಿನ ಮೆಣಸಿ ಸಸಿಗಳು ಮತ್ತು,50 ಸಾವಿರ ಪಪ್ಪಾಯಿ ಸಸಿಗಳು ವಿಪರೀತ ಮಳೆ ಗಾಳಿ ಆಲಿಕಲ್ಲಿನ ಮಳೆ ಬಿದ್ದು ಅಬ್ಬರಕ್ಕೆ ಸಂಪೂರ್ಣ ಗಿಡ ಮತ್ತು ಸಸಿಗಳು ನಾಶವಾಗಿವೆ.
ಬಿರುಗಾಳಿ ಸಹಿತ ಮಳೆಯಿಂದಾಗಿ ನಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಪಪ್ಪಾಯಿ ಮತ್ತು ಹಲೋಪಿನ ಮೆಣಸಿನ ಸಸಿಗಳು ಹಾಳಾಗಿದ್ದು ಸುಮಾರು ಅಂದಾಜು ಕನಿಷ್ಠ 75 ಲಕ್ಷ ರೂಪಾಯಿಗಳು ನಷ್ಠನಾಗಿದೆ. ಎಲ್ಲಾ ರೈತರ ಹಣೆಬರಹವೇ ಹೀಗೆ ಎಂದು ಎಂ.ಎಲ್ ರಾಮಚಂದ್ರ ಮತ್ತು ಸಹೋದರರಾದ ಎಂ.ಎಲ್ ಪ್ರಕಾಶ್ ನೊಂದು ಬೇಸರ ವ್ಯಕ್ತ ಪಡಿಸಿದರು.