ತಾಲೂಕಿನಲ್ಲಿ ಗಣೇಶೋತ್ಸವ ಸರಳ ಆಚರಣೆ

ಸಂಜೆವಾಣಿ ವಾರ್ತೆ                                
ಹಗರಿಬೊಮ್ಮನಹಳ್ಳಿ:ಸೆ.13 ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಿದರು.
ಕರೋನಾದಿಂದ ಗಣೇಶ ಹಬ್ಬ ಸಡಗರ ಸಂಬ್ರಮ ಕಂಡು ಬರಲಿಲ್ಲ.ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪರಿಣಾಮ ಸಾಂಸ್ಕೃತಿಕ ಕಾರ್ಯಕ್ರಮ ಡಿಜಿ ಇಲ್ಲದೆ ಗಣೇಶ್ ಭಕ್ತರಿಗೆ ನಿರಾಸೆ ಮೂಡಿಸಿದೆ.  ಭಾನುವಾರದಂದು ಮಾಲವಿ ಜಲಾಶಯದಲ್ಲಿ ಗಣೇಶನನ್ನು ವಿಸರ್ಜಿಸಿ ನಂತರ ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ಜವಳಿ ಬಸವರಾಜ, ಅಕ್ಕಂಡಿ ಕೊಟ್ರೇಶ್, ನಿಲವಂಜಿ ಶಿವಕುಮಾರ್ ಅಭಿಷೇಕ್, ಅರುಣ, ಗುರುಪ್ರಸಾದ್, ಕಿರಣ ಮಹೇಶ, ಗೋಣಿಸ್ವಾಮಿ, ಗುರುಕಿರಣ್, ಇತರರು ಪಾಲ್ಗೊಂಡಿದ್ದರು.