ತಾಲೂಕಿನಲ್ಲಿರುವ ಎಲ್ಲ ಕಾರ್ಖಾನೆಗಳಿಗಿಂತಲೂ ಅಧಿಕ ದರ ನೀಡಿದ್ದೇವೆ : ಅಧ್ಯಕ್ಷ ಪರಪ್ಪ ಸವದಿ

ಅಥಣಿ :ಸೆ.22: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆದ ರೈತರಿಗೆ ಹಲವಾರು ವರ್ಷಗಳಿಂದ ಯೋಗ್ಯ ಬೆಲೆ ನೀಡುತ್ತಾ ಬಂದಿದ್ಧು ಮುಂದೆಯು ತಾಲೂಕಿನ ರೈತರಿಗೆ ಯೋಗ್ಯವಾದ ಬೆಲೆಯನ್ನೇ ನೀಡುತ್ತೇವೆ ನಾವು ಯಾವತ್ತೂ ರೈತರ ಪರವಾಗಿದ್ದು ಕೇಂದ್ರ ಸರಕಾರ ನಿರ್ಧರಿಸುವ ಬೆಲೆಯನ್ನು ನೀಡಲಾಗುವದು. ಅಲ್ಲದೇ ನಾವು ಕೊಟ್ಟ ಮಾತಿಗೆ ತಪ್ಪಿಲ್ಲ ಮುಂದೆಯೂ ತಪ್ಪುವುದಿಲ್ಲ ಬಾಕಿ ಉಳಿದುಕೊಂಡಿರುವ 200ರೂ ಬಿಲ್ಲನ್ನು ಸಹ ನೀಡಲಾಗುವುದು ಎಂದು ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.

ಅವರು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ 31 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರೈತರ ಮತ್ತು ಕಬ್ಬು ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯು ಕಳೆದ 5 ವರ್ಷಗಳ ಅವಧಿಯಲ್ಲಿ ಅಥಣಿ ತಾಲೂಕಿನ ಇನ್ನುಳಿದ 5 ಕಾರಖಾನೆಗಳಲ್ಲಿಯೇ ಪ್ರತಿ ಟನ್ ಕಬ್ಬಿಗೆ ಅತೀ ಹೆಚ್ಚು ದರ ರೈತರಿಗೆ ಪಾವತಿಸಿದ್ದೇವೆ ಎನ್ನುವ ಹೆಮ್ಮೆ ಪಡುವಂತಾಗಿದೆ. ಕಳೆದ 5 ಹಂಗಾಮಿನಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರ ಖಾತೆಗೆ ಒಟ್ಟು 23, 775 ರೂಪಾಯಿಗಳನ್ನು ಪಾವತಿಸಿದೆ. ಎಂದ ಅವರು ಚಾಲ್ತಿ ವರ್ಷದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ 5 ಕೋಟಿ 20 ಲಕ್ಷ 86 ಸಾವಿರದಷ್ಟು ಲಾಭವಾಗಿದೆ ಎಂದರು.
ಕಳೆದ ಹಂಗಾಮಿನಲ್ಲಿ 6,41,519 ಟನ್ ಕಬ್ಬು ನುರಿಸಿ 11.48 ಇಳುವರಿ ಮೂಲಕ 7,30,500 ಕ್ವಿಂಟಾಲ್ ಸಕ್ಜರೆ ಉತ್ಪಾದಿಸಲಾಗಿದೆ ಜೊತೆಗೆ 6 ಕೋಟಿ 65 ಲಕ್ಷ 24 ಸಾವಿರದಷ್ಟು ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದು ಹೇಳಿದರು.
ಪ್ರತಿ ಸಲಕ್ಕಿಂತ ಈ ಬಾರಿ ಮಳೆಯ ಅಭಾವದಿಂದ ಇಳುವರಿ ಸಹ ಕಡಿಮೆ ಬರುವ ಸಾಧ್ಯತೆ ಇದೆ ಆದರಿಂದ ರೈತರಿಂದ ರೈತರಗಾಗಿ ಇರುವ ಕಾರ್ಖಾನೆ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೆ ಇದೆ. ಜೊತೆಗೆ ಇದುವರೆಗೆ ಬೇರೆ ಕಾರ್ಖಾನೆಯವರಂತೆ ತೂಕದಲ್ಲಿ ಮೋಸ, ವ್ಯತ್ಯಾಸ ಆದ ಉದಾಹರಣೆಗಳಿಲ್ಲ ಎಂದು ಹೇಳಿದರು.
ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ ಮಾತನಾಡಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ನಿರ್ಧರಿಸುವ ಕಬ್ಬಿನ ದರದ ಆಧಾರದಲಿಯೇ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ದರ ನಿರ್ಧಾರಿಸುತ್ತವೆ ಹೀಗಾಗಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಮೂರು ಜಿಲ್ಲೆಗಳಯೇ ಅತಿ ಹೆಚ್ಚು ದರ ನೀಡುವ ಕಾರಖಾನೆಯಾಗಿದೆ. ಸಕ್ಕರೆ ದರದಲ್ಲಿ ಕುಸಿತವಾಗಿದ್ದರೂ ಕೂಡ ನಮ್ಮ ಕಾರಖಾನೆಯು ರೈತರಿಗೆ ಒಳ್ಳೆಯ ದರ ನೀಡಿದ್ದು, ಪ್ರಸಕ್ತ ಹಂಗಾಮಿನಲ್ಲಿಯೂ ಸಹ ಇತರ ಎಲ್ಲ ಖಾಸಗಿ ಕಾರಖಾನೆಗಳಿಗಿಂತ ರೈತರಿಗೆ ಹೆಚ್ಚು ದರ ನೀಡುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ರೈತ ಸದಸ್ಯರು, ರೈತ ಸಂಘದ ಪದಾಧಿಕಾರಿಗಳು ಕೇಳಿದ ಪ್ರಶ್ನೆಗೆ ಕಾರಖಾನೆಯ ಅಧ್ಯಕ್ಷ ಪರಪ್ಪ ಸವದಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ ಉತ್ತರಿಸಿದರು. ಸಭೆ ನಡುವಳಿಕೆಯನ್ನು ಕಛೇರಿ ಅಧಿಕ್ಷಕ ಸುರೇಶ ಠಕ್ಕಣ್ಣವರ ಓದಿದರು, ಮುಖ್ಯ ಲೆಕ್ಕಾಧಿಕಾರಿ ಎ.ಸಿ.ರಾಚಪ್ಪನವರ 2023-24 ನೇ ಸಾಲಿನ ಅಂದಾಜು ಪತ್ರಿಕೆ ಓದಿ ಅನುಮೋದನೆ ಪಡೆದುಕೊಂಡರು.
ಈ ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕ ಮಂಡಳಿ ಸದಸ್ಯರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ವಿಶ್ವನಾಥ ಪಾಟೀಲ. ಉದ್ಯಮಿ ಶಿವಕುಮಾರ ಸವದಿ.ಯುವ ಮುಖಂಡರಾದ ಚಿದಾನಂದ ಸವದಿ, ರಮೇಶ ಸವದಿ. ಮಲ್ಲೇಶ ಸವದಿ, ಶಿವಾನಂದ ಸವದಿ, ಮಾಜಿ ಜಿಪಂ ಸದಸ್ಯ ಶ್ರೀಶೈಲ ನಾರಗೊಂಡ, ದುಂಡಪ್ಪ ಅಸ್ಕಿ, ಪ್ರದೀಪ ನಂದಗಾಂವ. ಪ್ರಶಾಂತ ಅಕ್ಕೋಳ. ಸೇರಿದಂತೆ, ರೈತ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು,,.
ಕಾರಖಾನೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಇರುವ ಹಿನ್ನೆಲೆಯಲ್ಲಿ ಸಿಪಿಐ ರವೀಂದ್ರ ನಾಯ್ಕೋಡಿ ಅವರ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು,

#
 ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯು ರೈತರ ಕಾರಖಾನೆಯಾಗಿದ್ದು, ತಾಲೂಕಿನ ರೈತರು ಮತ್ತು ಕಬ್ಬು ಬೆಳೆಗಾರರು ಕಾರಖಾನೆಯ ಹಿತ ಕಾಯುವ ನಿಟ್ಟಿನಲ್ಲಿ ತಾಲೂಕಿನ ರೈತರು ಕಾರಖಾನೆಗೆ ಉತ್ತಮ ಗುಣ ಮಟ್ಟದ ಕಬ್ಬನ್ನು ಪೂರೈಸಿ ಕಾರಖಾನೆಯ ಬೆಳವಣಿಗೆಗೆ ಸಹಕರಿಸಬೇಕು. ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ ರೈತರಲ್ಲಿ ಮನವಿ ಮಾಡಿದರು.