ತಾಲೂಕಾ ಸ್ವೀಪ್ ಸಮಿತಿಯ ಅಧಿಕಾರಿಗಳಿಂದ ಕಾಲ್ನಡಿಗೆ ಮೂಲಕ ಮತದಾನ ಜಾಗೃತಿ ಜಾಥಾ

ಆಲಮೇಲ:ಎ.11:ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಹಾಗೂ ಬೆಳವಣಿಗೆ ಮತ್ತು ಭವಿಷ್ಯದ ಹಿತ ಕಾಪಾಡಿಕೊಳ್ಳಬೇಕಾದರೆ ಕಡಾಯವಾಗಿ ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ.ಇದು ನಮ್ಮ ದೇಶದ ಮೂಲ ಹಕ್ಕುಗಳಲ್ಲಿ ಒಂದಾಗಿದೆ. ಚುನಾವಣೆಯೂ ಪ್ರಜಾಪ್ರಭುತ್ವದ ಬಹು ದೊಡ್ಡ ಹಬ್ಬವಾಗಿದೆ. ಕಡ್ಡಾಯ ಮತದಾನ ಮತ್ತು ನೈತಿಕ ಮತದಾನಕ್ಕೆ ನಾವೆಲ್ಲರೂ ಒತ್ತು ನೀಡಬೇಕಾಗಿದೆ ಎಂದು 33 ಸಿಂದಗಿ ವಿಧಾನ ಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಸಿದ್ಧರಾಮ ಮಾರಿಹಾಳ ವಿನಂತಿಸಿಕೊಂಡರು.

ಪಟ್ಟಣದ ಪಂಚಾಯ್ತಿ ಆವರಣದಲ್ಲಿ ಸೋಮವಾರ ತಾಲೂಕ ಸ್ವಿಫ್ ಸಮಿತಿ ಆಲಮೇಲ, ತಾಲೂಕ ಆಡಳಿತ ಹಾಗೂ ಪಟ್ಟಣ ಪಂಚಾಯ್ತಿ ಆಲಮೇಲ ಇವರ ನೇತ್ರತ್ವದಲ್ಲಿ ಎರ್ಪಡಿಸಿದ ಕಾಲ್ನಡಿಗೆ ಮೂಲಕ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಿಎಸ್ ಐ ಕುಮಾರ ಹಾಡಕಾರ ಮಾತನಾಡಿ ಮತದಾರರು ಯಾವುದೇ ಆಶೆ ಆಮಿಷಗಳಿಗೆ ಒಳಗಾಗಿ ತಮ್ಮ ಪವಿತ್ರವಾದ ಮತವನ್ನು ಮಾರಿಕೊಳ್ಳಬೇಡಿ.ನಿಮ್ಮ ಒಂದು ಮತದಿಂದ ಈ ರಾಜ್ಯದ ಭವಿಷ್ಯವನೇ ಬದಲಿಸಬಹುದು.ಅದಕ್ಕಾಗಿ ಮತದಾರರು ಯಾವುದೇ ಭಯ-ಭೀತಿಗಳಿಗೆ ಒಳಗಾಗದೆ ನಿರ್ಭಯವಾಗಿ ಮತ ಚಲಾಯಿಸಿ.ಮತದಾನಕ್ಕೆ ಯಾರಾದರೂ ಒತ್ತಾಯ ಅಥವಾ ಭಯ ಹುಟ್ಟಿಸುತ್ತಿದ್ದರೆ ಕೂಡಲೇ ಅಧಿಕಾರಿಗಳಿಗೆ ಸಂಪರ್ಕಿಸಿ. ನಿಮ್ಮ ಜೊತೆ ಇಲಾಖೆ ಇದೆ ಎಂದು ಮತದಾರರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ತಾಲೂಕ ಸ್ವಿಫ್ ಸಮಿತಿಯ ಅಧ್ಯಕ್ಷ ತಾಪಂ ಸಿಓ ಬಾಬು ರಾಠೋಡ.ತಹಸೀಲ್ದಾರ ಸುರೇಶ್ ಚಾವಲರ್. ಹಾಗೂ.ಆರೋಗ್ಯ ಇಲಾಖೆಯ ಡಾ/ಜಿ.ಎಸ್.ಪತ್ತಾರ. ಪಪಂ ಮುಖ್ಯಾಧಿಕಾರಿ ಜಿ.ವಿ.ಹಣ್ಣಕೇರಿ,ಕೃಷಿ ಇಲಾಖೆಯ ಅಧೀಕಾರಿ ಜಿ.ಎಸ್.ಅವಜಿ. ಮಹಿಳಾ ಮತ್ತು ಕಲ್ಯಾಣ ಇಲಾಖೆ.ಶಿಶು ಅಭಿವೃದ್ಧಿ ಇಲಾಖೆ ಹನುಮಂತ ಧರ್ಮಟ್ಟಿ., ಚುನಾವಣಾ ಶೇಕ್ಟರ್‍ಅಧಿಕಾರಿಗಳು ಹಾಗೂಅಂಗನವಾಡಿ.ಆಶಾ ಕಾರ್ಯಕರ್ತೆಯರು ಪೌರ ಕಾರ್ಮಿಕರು ಪೊಲೀಸ್ ಸಿಬ್ಬಂದಿಗಳು ಇದ್ದರು.