ತಾಲೂಕಾ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಮುದ್ನೂರ ಆಯ್ಕೆ

ಶಹಾಪುರ:ಜು.27:ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಮುದ್ನೂರರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಸಂಕಿನ ಅಧ್ಯಕ್ಷತೆ ವಹಿಸಿ ಮಾತನಾಡಿದರು ಪತ್ರಕರ್ತರು ಸಮಾಜದ ಸೇವಕರಾಗಿ ಸಮಾಜದಲ್ಲಿ ನಡೆಯುತ್ತಿರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಪತ್ರಕರ್ತರು ಸಮಾಜದಲ್ಲಿ ನಿಷ್ಠೆ ಹಾಗೂ ಪ್ರಮಾಣಿಕವಾಗಿ ಕೆಲಸವನ್ನು ಮಾಡಬೇಕು ಉತ್ತಮ ಸಂಘಟನೆಯೊಂದಿಗೆ ಎಲ್ಲರನ್ನು ಕುಡಿಕೊಂಡು ಸಂಘದ ಏಳಿಗೆಗಾಗಿ ಪ್ರತಿಯೊಬ್ಬರು ದುಡಿಯಬೇಕು ಎಂದು ಸಲಹೆ ನೀಡಿದರು .
ಗುರುಮಣಿಕಂಠ ನಿಕಟಪೂರ್ವ ಅಧ್ಯಕ್ಷರಾದ ನಾರಾಯಣಚಾರ್ಯ ಸಗರ ಹಿರಿಯ ಪತ್ರಕರ್ತರಾದ ಶರಣು ಗದ್ದುಗೆ ಟಿ. ನಾಗೇಂದ್ರ. ಅಮರೇಶ್ ಹಿರೇಮಠ, ಈರಣ್ಣ ಹಾದಿಮನಿ ಮುಕ್ತಾರಹಮ್ಮದ ಭಾಗಣ್ಣ ರಸ್ತಾಪುರ ಈರಣ್ಣ ಮೌರ್ಯ ರಾಜು ಗುತ್ತೇದಾರ್ ನಾಗೇಂದ್ರಸಿಂಗ ಠಾಕೋರ್ ಚಂದ್ರಶೇಖರ್ ಕಟ್ಟಿಮನಿ ವಿಶಾಲ್ ದೋರನಹಳ್ಳಿ ಮಂಜುನಾಥ್ ಬಿರಾದಾರ್ ಮಹೇಶ್ ಪತ್ತಾರ್ ವೆಂಕಟೇಶ್ ಆಲೂರ ಚನ್ನಬಸು ದಿಗ್ಗಿ ಮಲ್ಲಿಕಾರ್ಜುನ ಮಳಿಕೇರಿ ಅಜಯ್ ಶಹಾಪುರ ರಾಜಶೇಖರ್ ಪಾಟೀಲ್ ಮಡಿವಾಳಪ್ಪ ಪಾಟೀಲ್ ಸೇರಿದಂತೆ ತಾಲೂಕಿನ ಸರ್ವ ಪತ್ರಕರ್ತರು ಹಾಜರಿದ್ದರು.