ತಾಲೂಕಾ ಘಟಕ ರಚನೆ


ಲಕ್ಷ್ಮೇಶ್ವರ,ನ.21: ಪಟ್ಟಣದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಸಮಾವೇಶಗೊಂಡಿದ್ದ ಕರ್ನಾಟಕ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘದ ತಾಲೂಕಾ ಘಟಕವನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಎಫ್ ಎಸ್ ತಳವಾರ, ಗೌರವಾಧ್ಯಕ್ಷರಾಗಿ ಮಂಜುನಾಥ್ ಕೊಕ್ಕರಗುಂದಿ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಪಾಲ ಗೊಂಗಡಿ ಆಯ್ಕೆ ಆದರು.
ಈ ಸಂದರ್ಭದಲ್ಲಿ ಡಿ ಡಿ ಲಮಾಣಿ, ಎಮ್ ಎಸ್ ನಾಶಿಪುಡಿ, ಗೀತಾ ಹಳ್ಯಾಳ, ಎಚ್ ಡಿ ನಿಂಗರೆಡ್ಡಿ, ಸತೀಶ್ ಬೊಮಲೆ, ಬಿ ಎಮ್ ಯರಗುಪ್ಪಿ,ಎಮ್ ಎನ್ ಭರಮಗೌಡರ, ವಾಸು ದಿಪಾಳಿ, ಉಮೇಶ್ ನೇಕಾರ, ಜಿ ಎಚ್ ರಾಜೂರ, ಎನ್ ಎನ್ ಸಾವಿರಕುರಿ, ಎನ್ ಎ ಮುಲ್ಲಾ, ಜೆ ಎಸ್ ಗಾಯಕವಾಡ, ಶಂಭುಲಿಂಗ, ಎಫ್ ಎಸ್ ಡಂಬಳ, ಪಿ ಸಿ ಕಾಳಶೆಟ್ಟಿ ಇದ್ದರು.