ತಾಲೂಕಾ ಆಸ್ಪತ್ರೆಗೆ ಹೈಟೆಕ್ ಅಂಬ್ಯುಲೆನ್ಸ್ ಹಸ್ತಾಂತರಿಸಿದ ಸವದಿ

ಅಥಣಿ,ಮೇ28 : ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ತಮ್ಮ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಅಡಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹದಿನಾರು ಲಕ್ಷ ರೂಗಳ ವೆಚ್ಚದಲ್ಲಿ ಒಂದು ಸ್ಟ್ಯಾಂಡರ್ಡ್ ಅಂಬ್ಯುಲೆನ್ಸ ವಾಹನವನ್ನು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ ಮುಖಾಂತರ ಹಸ್ತಾಂತರ ಮಾಡಿದರು.
ಅಥಣಿ ತಾಲ್ಲೂಕಿನಲ್ಲಿ ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹೆಚ್ಚಿದ ಬೆನ್ನಲ್ಲೆ ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸಿದ್ದು ಜನರ ಚಿಕಿತ್ಸೆಗಾಗಿ ಈಗಾಗಲೇ ಐವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟ್ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕೊವಿಡ್ ಸೆಂಟರ್ ಸ್ಥಾಪಿಸಿ ತಾಲೂಕಿನ ಜನರ ಪಾಲಿನ ಸಂಜೀವಿನಿಯಾಗಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಸುಮಾರು ಹದಿನಾರು ಲಕ್ಷ ರೂಪಾಯಿ ವೆಚ್ಚದಲ್ಲಿ ಇಂದು ಅಥಣಿ ಸರ್ಕಾರಿ ಆಸ್ಪತ್ರೆಗೆ ಒಂದು ಸ್ಟಾಂಡರ್ಡ್ ಅಂಬ್ಯುಲೆನ್ಸ ನೀಡಲಾಗಿದ್ದು ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ ಬೆಳಗಾವಿಯ ಬಿಮ್ಸ ಆಸ್ಪತ್ರೆ ಆವರಣದಲ್ಲಿ ಗಲಾಟೆಯಾದ ಸಮಯದಲ್ಲಿ ಕೋವಿಡ್ ನಿಂದಾಗಿ ತಮ್ಮವರನ್ನು ಕಳೆದುಕೊಂಡು ಆಕ್ರೋಶ ಗೊಂಡಿದ್ದ ಜನರು ಬೆಂಕಿ ಹಚ್ಚಿದ್ದರಿಂದ ಈ ಮೊದಲು ಕೊಟ್ಟಿದ್ದ ಅಂಬ್ಯುಲೆನ್ಸ ಸುಟ್ಟುಹೋಗಿ ಅಥಣಿ ತಾಲೂಕಿನ ಜನರಿಗೆ ಚಿಕಿತ್ಸೆಗಾಗಿ ಮೀರಜ್ ಮತ್ತು ಬೆಳಗಾವಿ ಆಸ್ಪತ್ರೆಗೆ ತೆರಳಲು ಅಂಬ್ಯುಲೆನ್ಸಗಳ ಕೊರತೆ ಎದುರಾಗಿದ್ದನ್ನು ಅರಿತು ತಾಲೂಕಿನ ಜನರ ಅನುಕೂಲಕ್ಕಾಗಿ ಸದ್ಯ ಈ ಅಂಬ್ಯುಲೆನ್ಸ ಕೊಡಲಾಗುತ್ತಿದೆ ಅಂಬ್ಯುಲೆನ್ಸ್ ಹದಿನಾರು ಲಕ್ಷ ರೂಪಾಯಿ ವೆಚ್ಚದಲ್ಲಿ ಸೆಮಿ ಸಿಸ್ಟಮ್ ಹೊಂದಿದ್ದು ಸಾಮಾನ್ಯ ಚಟುವಟಿಕೆಗೆ ಮತ್ತು ಕೆಲವೇ ದಿನಗಳಲ್ಲಿ ಇನ್ನೂಂದು ಸುಸಜ್ಜಿತವಾದ ಅಂಬ್ಯುಲೆನ್ಸ ಇಪ್ಪತ್ತೇಳು ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಟಾಪ್ ಎಂಡ್ ಮಾದರಿಯಲ್ಲಿ ಆಕ್ಸಿಜನ್, ವೆಂಟಿಲೇಟರ್, ಮತ್ತು ಎಸಿ ಹಾಗೂ ಫ್ಯಾನಗಳನ್ನು ಹೊಂದಿರುವ ಸುಸಜ್ಜಿತ ರೀತಿಯಲ್ಲಿ ಸಜ್ಜಾದ ಅಂಬ್ಯುಲೆನ್ಸ ಕೆಲವೇ ದಿನಗಳಲ್ಲಿ ಹಸ್ತಾಂತರವಾಗಲಿದೆ, ತುರ್ತು ಸಂದರ್ಭದಲ್ಲಿ ಇಂತಹ ಸುಸಜ್ಜಿತವಾದ ಅಂಬ್ಯುಲೆನ್ಸ್ ತಾಲೂಕಿನ ಜನರಿಗೆ ಅವಶ್ಯಕತೆ ಇತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಈ ವೇಳೆ ಡಿಸಿಎಂ ಸುಪುತ್ರ ಚಿದಾನಂದ ಸವದಿ, ಮುಖಂಡರಾದ ಅಪ್ಪಾಸಾಹೇಬ ಅವತಾಡೆ, ಸುಶೀಲಕುಮಾರ ಪತ್ತಾರ, ಪ್ರದೀಪ ನಂದಗಾಂವ,ಆಶೀಪ್ ತಾಂಬೊಳಿ, ಅಥಣಿ ತಹಶೀಲ್ದಾರ ದುಂಡಪ್ಪಾ ಕೋಮಾರ, ಡಿವೈಎಸ್ಪಿ ಎಸ್ ವಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ, ಉಪ ತಹಶೀಲ್ದಾರ ಮಹಾದೇವ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ ತಾಲೂಕಾ ಆರೋಗ್ಯಾಧಿಕಾರಿ ಡಾ, ಬಸಗೌಡಾ ಕಾಗೆ, ಮುಖ್ಯ ವೈದ್ಯಾಧಿಕಾರಿ ಡಾ, ಸಿ ಎಸ್ ಪಾಟೀಲ, ಪ್ರಕಾಶ ನರಟ್ಟಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.