ತಾಲೂಕಾಸ್ಪತ್ರೆಗೆ ಶಾಸಕ ಪಾಟೀಲ ಧೀಡಿರ ಭೇಟಿ

ಇಂಡಿ: ಆ.17:ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಇಂದು ಶಾಸಕ ಯಶವಂತರಾಯಗೌಡ ಪಾಟೀಲ ಧಿಡೀರನೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯರೊಂದಿಗೆ ಕುಂದು ಕೊರತೆ ಆಲಿಸಿದರು.

ಈ ಸಂಧರ್ಬದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ಮಾಡಿದರು ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಲಭ್ಯಗಳ ಬಗ್ಗೆ ತಿಳಿಸಿ , ವೈದ್ಯರ ಕೊರತೆ ಇರುವದನ್ನು ಗಮನಿಸಿದ್ದೇನೆ ಕೂಡಲೆ ಕ್ರಮಕೈಗೋಳ್ಳುವ ಭರವಸೆ ನೀಡಿದರು. ಸಾರ್ವಜನಿಕ ಆಸ್ಪತ್ರೆ ಎಂದಾಕ್ಷಣ ಇಲ್ಲಿಗೆ ಚಿಕಿತ್ಸೆಗೆ ಬಡವರು ದುರ್ಬಲರು ,ಆರ್ಥಿಕವಾಗಿ ಕಷ್ಟದಲ್ಲಿರುವ ಜನರು ಬರುತ್ತಾರೆ ಇಂತಹ ಸಂದರ್ಬದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ವೈದ್ಯ ನಾರಾಯಣೋ ಹರಿ ಎನ್ನುವಂತೆ ವೈದ್ಯರು ದೇವರ ಸಮಾನ ನಿಮ್ಮಲ್ಲಿ ಚಿಕಿತ್ಸೆಗಾಗಿ ಬಂದ ಪ್ರತಿ ರೋಗಿಗಳಿಗೆ ಪ್ರೀತಿ,ವಾತ್ಸಲ್ಯದಿಂದ ಕಾಣಿದರೆ ಅರ್ಧರೋಗ ವಾಸಿಯಾಗುತ್ತದೆ. ಕೋವಿಡ್-19 ಕರಾಳ ಛಾಯಯಿಂದ ದೇಶ ಇನ್ನು ಆರ್ಥಿಕವಾಗಿ ಸುಧಾರಣೆ ಕಂಡಿಲ್ಲ, ಇಂದು ಸಾಕಷ್ಟು ಯುವಕರಿಗೆ ,ಮಧ್ಯವಸ್ಕರಿಗೆ ಹೃದಯಾಘಾತಗಳು ಸಂಭವಿಸುತ್ತಿವೆ ಇದಕ್ಕೆ ಕಾರಣ ಎನು ಎಂಬುದು ತಜ್ಞರು ಪತ್ತೆ ಹಚ್ಚುವ ಅವಶ್ಯಕತೆ ಇದೆ. ಹಿಂದಿನ ಆಹಾರ ಪದ್ದತಿಗಳು ಇಂದಿನ ಆಹಾರ ಸಾಕಷ್ಟು ವ್ಯತ್ಯಾಸವಿದೆ ನಮ್ಮ ಆಹಾರ ಪದ್ದತಿಗಳು ಬದಲಾವಣೆಯಾಗುವುದು ಕೂಡಾ ಅವಶ್ಯಕ. ಆದಷ್ಟು ವೈದ್ಯರು ರೋಗಿಗಳ ರಕ್ಷಣೆ ಮಾಡಿ ಜೀವ ಉಳಿದರೆ ಜೀವನ ಆದ್ದರಿಂದ ಆಸ್ಪತ್ರೆಗಳಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿ ಎಂದು ಹಿರಿಯ ವೈಧ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ,ಡಾ.ರಾಜಶೇಖರ ಕೋಳೆಕರ್ , ಡಾ.ವಿಫಲ ಕೋಳೆಕರ್, ಡಾ.ಅಮೀತ ಕೋಳೆಕರ್,ಡಾ. ವಿಕಾಸ ಸಿಂದಗಿ, ಡಾ.ಮೇತ್ರಿ,  ದಂತ ವೈಧ್ಯಾಧಿಕಾರಿ ಡಾ.ರವಿ ಭತಗುಣಕಿ ,ಡಾ. ವಾಲಿ, ಡಾ.ಪ್ರೀತಿ ಕೋಳೆಕರ್, ವಿಜಯಕುಮಾರ ಪೊಳ್, ವಿಜಯಲಕ್ಷ್ಮೀ ಹಾದಿಮನಿ, ರವಿ ಹಾದಿಮನಿ, ಬಸು ಡವಳಗಿ,ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಪ್ರಭು ಹೊಸಮನಿ,  ಸೇರಿದಂತೆ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಇದ್ದರು.