ತಾಲಿಬಾನ್ ಕಮಾಂಡರ್ ಮೌಲ್ವಿ ಹತ್ಯೆ

ಖೈಬರ್ ಪತುಂಕ್ವಾ (ಪಾಕಿಸ್ತಾನ),ಏ.೨೦- ತಾಲಿಬಾನ್‌ನ ಪ್ರಮುಖ ಕಮಾಂಡರ್ ಮೌಲ್ವಿ ನಾಯಕ್ ಮೊಹಮದ್‌ನನ್ನು ಹತ್ಯೆ ಮಾಡಲಾಗಿದೆ. ಈ ಘಟನೆಯಲ್ಲಿ ಆತನ ಇಬ್ಬರು ಸಹಚರರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪೇಶಾವರದ ಖೈಬರ್ ಪತುಂಕ್ವಾದಲ್ಲಿ ಸಂಭವಿಸಿದೆ.
ಆದರೆ, ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ ಎಂದು ನಂಗ್ರಹಾರ್ ಗೌರ್‍ನರ್ ಜಿಯಾವುಲ್ಲಾಹಕ್ ಅಮರ್‌ಕಿಲ್ ಟ್ವೀಟ್ ಮಾಡಿದ್ದಾರೆ.
ವರದಿಗಳ ಪ್ರಕಾರ ತಾಲಿಬಾನ್ ಕಮಾಂಡರ್‌ನನ್ನು ಪಾಕಿಸ್ತಾನದ ಐಸಿಸ್ ಉಗ್ರಗಾಮಿ ಸಂಘಟನೆ ಹತ್ಯೆ ಮಾಡಿದೆ ಎಂದು ಹೇಳಲಾಗಿದೆ.
ಆಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ಸಮ್ಮೇಳನ ನಡೆಸುವಂತೆ ಆಫ್ಘಾನಿಸ್ತಾನದಲ್ಲಿನ ಯುರೋಪಿಯನ್ ಒಕ್ಕೂಟದ ರಾಯಭಾರಿ ಆಂಡ್ರಿಸ್ ವಾನ್‌ಬ್ರಾಂಡ್ ಒತ್ತಾಯಿಸಿದ ಬೆನ್ನಲ್ಲೆ ಈ ಹತ್ಯಾಕಾಂಡ ನಡೆದಿದೆ.