ತಾರೆಯರ ಮಾರ್ಜಾಲ ನಡಿಗೆ

ಚಂದನವನದ ತಾರೆಯರ ಫ್ಯಾಶನ್ ಷೋ ಮತ್ತಷ್ಟು ಕಳೆಕಟ್ಟಿತ್ತು. ನಟಿಯರಾದ ಅಮಿತಾರಂಗನಾಥ್, ಶರ್ಮಿತಾಗೌಡ, ಶುಭರಕ್ಷಾ, ದ್ರಾವ್ಯಶೆಟ್ಟಿ, ಮಮತಾರಾವುತ್, ಸಂಜನ, ಶ್ರಾವ್ಯಗಣಪತಿ, ಸಂಭ್ರಮಶ್ರೀ, ಸ್ವಾತಿ, ತೇಜುರಾಜ್ ಮತ್ತು ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್‌ಕುಮಾರ್ ಸೇರಿದಂತೆ ಹಲವು ನಟಿಯರು ರೂಪದರ್ಶಿಗಳ ಜೊತೆ ಹೆಜ್ಜೆ ಹಾಕುವ ಮೂಲಕ ತಾರಮೆರಗು ತಂದುಕೊಟ್ಟರು.
ನಟಿ ಹಾಗೂ ಸೂಪರ್ ಮಾಡೆಲ್ ಸಂಹಿತಾವಿನ್ಯಾ ಷೋ ಸ್ಟಾಪರ್ ಆಗಿ ಕಾಣಿಸಿಕೊಂಡಿದ್ದು ಗಮನ ಸೆಳೆದರು. ಫಾರ್ ಎವರ್ ನವೀನ್‌ಕುಮಾರ್ ಸಂಗ್ರಹದಲ್ಲಿ, ಇನ್‌ಸ್ಪೈರ್ ಇವೆಂಟ್ಸ್ ರೂವಾರಿ ಸುರೇಶ್‌ಬಾಬು ಷೋವನ್ನು ಆಯೋಜನೆ ಮಾಡಿದ್ದರು.