ತಾರಿಹಾಳ ಬೆಂಕಿ ಅವಘಡ: ಮೃತರ ಸಂಖ್ಯೆ ಮೂರಕ್ಕೇರಿಕೆ

ಹುಬ್ಬಳ್ಳಿ,ಜು.24: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಸ್ಪಾರ್ಕಲ್ ತಯಾರಿಕಾ ಘಟಕದಲ್ಲಿ ನಿನ್ನೆ ನಡೆದ ಅಗ್ನಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದು ಈ ಮೂಲಕ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಅವಘಡದಲ್ಲಿ ಗದಗ ಮೂಲದ ವಿಜಯಲಕ್ಷ್ಮಿ ವೀರಭದ್ರಪ್ಪ ಯಚ್ಚನಗಾರ ಎಂಬುವವರು ನಿನ್ನೆ ಸಾವಿಗೀಡಾಗಿದ್ದರೆ ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ ಇಂದು ಬೆಳಗಿನ ಜಾವ ಮತ್ತೋರ್ವ ಮಹಿಳೆ ಹಾಗೂ ಪುರುಷ ಸಾನ್ನಪ್ಪಿದ್ದು ಅವರ ಹೆಸರು, ವಿವರಗಳಿನ್ನೂ ಸಿಗಬೇಕಿದೆ.
ತಾರಿಹಾಳದ ಸ್ಪಾರ್ಕಲ್ ತಯಾರಿಕಾ ಘಟಕದಲ್ಲಿ ನಿನ್ನೆ ದಿಡೀüರ ಬೆಂಕಿ ಹೊತ್ತಿಕೊಂಡು ಮಹಿಳಾ ಕಾರ್ಮಿಕರು ಸೇರಿದಂತೆ 15 ಜನ ಗಾಯಗೊಂಡಿದ್ದರು. ಇವರನ್ನು ನಗರದ ಕಿಮ್ಸ್‍ಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು.
ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ 8 ಜನರಲ್ಲಿ ವಿಜಯಲಕ್ಷ್ಮೀ ಅವರು ನಿನ್ನೆ ಮೃತಪಟ್ಟರೆ ಇನ್ನಿಬ್ಬರು ಇಂದು ಬೆಳಗಿನ ಜಾವ ಮೃತಪಟ್ಟರು.
ಗಾಯಾಳುಗಳಲ್ಲಿ ಬಹುತೇಕರಿಗೆ ಕೈ,ಕಾಲು, ಮುಖ ಕುತ್ತಿಗೆ ಸುಟ್ಟಿದ್ದು ಕಿಮ್ಸ್‍ನಲ್ಲ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ಸಯಂಕಾಲ 4.30ರ ವೇಳೆಗೆ ಘಟಕದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ಈ ಸಂದರ್ಭದಲ್ಲಿ ಘಟಕಲ್ಲಿ 20ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು. ಇವರಲ್ಲಿ ಹಲವರು
ಘಟಕದಿಂದ ಹೊರಗೆ ಓಡಿ ಬಚಾವಾದರೆ ಉಳಿದವರು ಒಳಗಡೆಯೇ ಸಿಲುಕಿಕೊಂಡರು.
ಬೆಂಕಿ ಎಲ್ಲೆಡೆ ವ್ಯಾಪಿಸಿ ಘಟಕದಲ್ಲಿದ್ದ ಸಾಮಗ್ರಿಗಳು ಸುಟ್ಟು ಹೋಗಿದ್ದು ಅಪಾರ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್, ಡಿ.ಸಿ.ಪಿ.ಸಾಹಿಲ್ ಬಾಗ್ಲಾ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಕೊಂಡಿದ್ದಾರೆ.