ತಾರಿಹಾಳ ಬಳಿ ಲಾರಿಗಳ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಹುಬ್ಬಳ್ಳಿ, ನ 23: ಲಾರಿಗಳೆರಡು ಪರಸ್ಪರ ಡಿಕ್ಕಿ ಹೊಡೆದದ್ದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆತಡರಾತ್ರಿ ನಗರದ ಹೊರವಲಯದ ತಾರಿಹಾಳ ಬಳಿ ನಡೆದಿದೆ.
ತಾರಿಹಾಳ ಗ್ರಾಮದ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದ್ದು, ಗಾಯಾಳುಗಳಿಬ್ಬರನ್ನು ಕಿಮ್ಸ್‍ಗೆ ದಾಖಲಿಸಲಾಗಿದೆ. ಒಂದು ಲಾರಿಯು ಬೆಂಗಳೂರಿನಿಂದ ಧಾರವಾಡ ಕಡೆಗೆ ಹೊರಟಿದ್ದರೆ, ಮತ್ತೊಂದು ಲಾರಿಯು ಧಾರವಾಡದಿಂದ ದಾವಣಗೇರೆ ಕಡೆಗೆ ಹೊರಟಿತ್ತು.
ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಾಗ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.