ತಾರಫೈಲ್ ಬಡಾವಣೆಗೆ ಶವಮುಕ್ತಿ ವಾಹನ ನೀಡಲು ಮನವಿ

ಕಲಬುರಗಿ,ಜೂ.11- ವಾರ್ಡ ನಂ.48ರ ತಾರಫೈಲ್ ಬಡಾವಣೆಯ ರುದ್ರಭೂಮಿಗೆ ಶವಮುಕ್ತಿ ವಾಹನ (ಶವ ಸಾಗಿಲು ವಾಹನ) ಒದಗಿಸುವಂತೆ ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ತಾರಫೈಲ ರುದ್ರಭೂಮಿಯ ಮುಕ್ತಿ ವಾಹನ ಹಳೆಯದಾಗಿದ್ದು, ಸಂಪೂರ್ಣ ಹಾಳಾಗಿದೆ, ಶವ ಸಂಸ್ಕಾರಕ್ಕೆ ಶವಗಳನ್ನು ಸಾಗಿಲು ತಾರಫೈಲ ಸೇರಿದಂತೆ ಸುತ್ತಲಿನ ಬಡಾವಣೆಗೆ ತುಂಬ ತೊಂದರೆಯಾಗುತ್ತಿದ್ದು, ಮಹಾನಗರ ಪಾಲಿಕೆಯ ವಿವಿಧ ಯೋಜನೆಯಡಿ ಮುಕ್ತವಾಹನ ಒಂದನ್ನು ಮಂಜೂರು ಮಾಡುವಂತೆ ಪಾಲಿಕೆ ಆಯುಕ್ತರಾದ ಸ್ನೇಹಲ ಸುಧಾಕರ ಲೋಖಂಡೆ ಅವರಿಗೆ ಸೇನೆಯ ವತಿಯಿಂದ ಮನವಿ ಸಲ್ಲಿಸಿದ್ದಾರೆ.
ಸೇನೆಯ ನಿಯೋಗದಲ್ಲಿ ಶೇಷಗಿರಿ ಮರತೂರಕರ್, ಸುನೀಲ ಪಾಣೆಗಾಂವ, ಸಂಜು ಮಾಳಗೆ, ಸಾಗರ ಕುಮಸಿ, ಪ್ರಶಾಂತ ಗೊಲ್ಲಾಬಾವಡಿ, ವಿನಾಯಕ ಪಾಣೆಗಾಂವ ಸೇರಿದಂತೆ ಹಲವರಿದ್ದರು.