ತಾರತಮ್ಯ ಮಾಡದೇ ಅಭಿವೃದ್ಧಿ ಮಾಡಿದ್ದೇವೆ: ಬಳ್ಳಾರಿ

ಬ್ಯಾಡಗಿ,ಮೇ21:ಸ್ವಪಕ್ಷೀಯರ ವಿರೋಧಿ ಚಟುವಟಿಕೆ ಮುಂದೆ ಕಳೆದ 5 ವರ್ಷದಲ್ಲಿ ನಾನು ಬಿಜೆಪಿ ಶಾಸಕನಾಗಿ 2500 ಕೋಟಿ ಅಭಿವೃದ್ಧಿ ಕಾರ್ಯಗಳು ಗೌಣವಾಗಿ ಹೋಗಿವೆ, ಬಿಜೆಪಿ ಕಾರ್ಯಕರ್ತರ ಪಕ್ಷ ಯಾವುದೇ ಕಾರಣಕ್ಕೂ ಸೋಲಿನಿಂದ ದೃತಿಗೆಡದೇ ಮುಂದೆ ಬರುವಂತಹ ಕಾರ್ಯಕರ್ತರ ಚುನಾವಣೆಗಳನ್ನು ನಾವೆಲ್ಲರೂ ಸೇರಿ ಶಿಸ್ತುಬದ್ಧವಾಗಿ ಮಾಡೋಣ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು.
ಮೋಟೆಬೆನ್ನೂರಿನ ಬಿಆರ್‍ಇ ಸಭಾ ಭವನದಲ್ಲಿ ಏರ್ಪಡಿಸಿದ್ದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಚಿಂತನ-ಮಂಥನ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಾವು 2018 ರಲ್ಲಿ ಆಯ್ಕೆಯಾದ ಬಳಿಕ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದು 14 ತಿಂಗಳು ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾಗಿದ್ದು ಕೇವಲ 21.60 ಕೋಟಿ ಅನುದಾನ ಸಾಧ್ಯವಾಗಿತ್ತು ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಅಸ್ಥಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿ ಸುಮಾರು 2500 ಕೋಟಿ ರೂ ಅನುದಾನ ನೀಡಿದ್ದು ಅತ್ಯಂತ ಸ್ಮರಣೀಯವಾಗಿದೆ ಎಂದರು.
ತಾರತಮ್ಯ ಮಾಡದೇ ಅಭಿವೃದ್ಧಿ:ಯಾವುದೇ ಗ್ರಾಮವಿರಲಿ ತಾರತಮ್ಯ ಮಾಡದೇ ಅಭಿವೃದ್ಧಿ ಮಾಡಿದ್ದೇನೆ ಮತಕ್ಷೇತ್ರದ 117 ಗ್ರಾಮಗಳಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮ ತಲುಪುವಂತೆ ಮಾಡಿದ್ದೇನೆ, ಅದಾಗ್ಯೂ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಕಾರ್ಯಕ್ರಮಗಳ ಘೋಷಣೆ ಬಿಜೆಪಿಯನ್ನು ತಿರಸ್ಕರಿಸುವಂತೆ ಮಾಡಿದೆ, ಹಾಗೆಂದ ಮಾತ್ರಕ್ಕೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಪ್ರತಿದಿವಸ ಗ್ರಾಮಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಕೆಲಸಕ್ಕೆ ಮುಂದಾ ಗುವುದಾಗಿ ತಿಳಿಸಿದರು.
ಸೋಲು-ಗೆಲವು ಎರಡನ್ನೂ ಸಮಭಾವದಿಂದ ನೋಡುತ್ತೇನೆ, ಫಲಿತಾಂಶ ಹೊರಬಂದ ದಿನದಿಂದಲೇ ಮತ್ತೆ ಬಿಜೆಪಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ತಾವು ಕಳೆಯಲು ಸಮಯದ ಅಭಾವದ ಕೊರತೆಯೂ ಕೂಡ ಸೋಲಿಗೆ ಕಾರಣವಾಗಿರಬಹುದು ಹೀಗಾಗಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ಸಿದ್ಧರಾಜು ಕಲಕೋಟಿ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಿರೂಪಾಕ್ಷಪ್ಪ ಕಡ್ಲಿ, ಶಿವಕುಮಾರ ಮುದ್ದಪ್ಪಳವರ, ರಾಜು ಹೊಸಕೇರಿ, ಸುರೇಶ ಅಸಾದಿ, ಶಿವಯೋಗಿ ಶಿರೂರ, ಶಿವಬಸಣ್ಣ ಕುಳೇನೂರ, ಪುರಸಭೆ ಅಧ್ಯಕ್ಷೆ ಫಕ್ಕೀರಮ್ಮ ಛಲವಾದಿ, ಸದಸ್ಯ ರಾದ ಕಲಾವತಿ ಬಡಿಗೇರ, ಸುಭಾಸ್ ಮಾಳಗಿ, ಗಾಯತ್ರಿ ರಾಯ್ಕರ್, ವಿನಯ್ ಹಿರೇಮಠ, ಎಂ.ಎಸ್.ಪಾಟೀಲ, ಶಂಕ್ರಣ್ಣ ಮಾತನವರ, ಎಸ್.ಎನ್.ಯಮನಕ್ಕನವರ, ತಾಲೂಕಾಧ್ಯಕ್ಷ ಹಾಲೇಶ ಜಾಧವ, ಮುರಿಗೆಪ್ಪ ಶೆಟ್ಟರ ಸೇರಿದಂತೆ ಇನ್ನಿತರರಿದ್ದರು.