ತಾರತಮ್ಯವಿಲ್ಲದ ಶಿಕ್ಷಣ ದೊರೆಯಬೇಕು: ಸುಭಾಷ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.21: ಖಾಸಗೀ ಶಾಲಾ ಕಾಲೇಜುಗಳ ಪ್ರಭಾವದಲ್ಲಿ ಸಾಮಾನ್ಯರು ಶಿಕ್ಷಣ ಪಡೆಯುವ ಸರ್ಕಾರಿ ಶಿಕ್ಷಣ ವ್ಯವಸ್ಥೆ ಕ್ಷೀಣವಾಗುತ್ತಿದೆ‌. ಅದಕ್ಕಾಗಿ ತಾರತಮ್ಯ ವಿಲ್ಲದ ಶಿಕ್ಷಣ ಎಲ್ಲರಿಗೂ ದೊರೆಯುವಂತ ಕಾರ್ಯ ಸರ್ಕಾರಗಳಿಂದ ಆಗಬೇಕು ಎಂದು ಏಐಡಿಎಸ್ ಓ ಸಂಘಟನೆಯ ಮುಖಂಡ ಸುಭಾಷ್ ಆಗ್ರಹಿಸಿದ್ದಾರೆ.
ಅವರು ಇಂದು‌ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತ. ಸೆ.1,2 ಮತ್ತು 3 ರಂದು ತುಮಕೂರಿನಲ್ಲಿ ಸಂಘಟನೆಯ 8 ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನ ನಡೆಯಲಿದೆ. ರಾಜ್ಯದ ವಿವಿಧಡೆಯಿಂದ 10 ಸಾವಿರ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ. ಮುರಿಗೆಪ್ಪ ಸೇರಿದಂತೆ ಇನ್ನಿತರರು  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ತಿಳಿಸಿದರು.
ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಒದಗಿಸಬೇಕು, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು,  ಪಠ್ಯಕ್ರಮದ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮನಿರಪೇಕ್ಷ ವಾತಾವರಣವನ್ನು ರಕ್ಷಿಸಬೇಕು‌ ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಖಾತ್ರಿಪಡಿಸಬೇಕು, ಎನ್‌ ಈಪಿ-2020ರ ಅಪ್ರಜಾತಾಂತ್ರಿಕ ಹೇರಿಕೆಯನ್ನು ಕೈಬಿಡಬೇಕು, ಸ್ವಯಂ ಹಣಕಾಸು ಸಂಸ್ಥೆಗಳನ್ನು ನಿಲ್ಲಿಸಿ, ತಾರತಮ್ಯವಿಲ್ಲದೆ ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು.  ಅತಿಥಿ ಶಿಕ್ಷಕರ ಹಕ್ಕುಗಳನ್ನು ರಕ್ಷಿಸಬೇಕು ಸೇರಿದಂತೆ ಇಬ್ನಿತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರಲು ಸಮ್ಮೇಳನದಲ್ಲಿ ಹೋರಾಟದ ರೂಪರೇಷ ರಚಿಸಲಿದೆಂದರು.
ಈ ಸಂದರ್ಭದಲ್ಲಿ ಸಮ್ಮೇಳನದ ಪೋಸ್ಟರ್ ನ್ನು ಬಿಡುಗಡೆ ಮಾಡಲಾಯ್ತು. ಸಂಘಟನೆಯ ರವಿಕಿರಣ್, ಕಂಬಳಿ ಮಂಜುನಾಥ್, ಈರಣ್ಣ ಮೊದಲಾದವರು ಸುದ್ದಿಗೋಷ್ಟಿಯಲ್ಲಿ ಇದ್ದರು.