ತಾಯ್ನಾಡಿಗೆ ಮರಳಿದ ಸೈನಿಕನಿಗೆ ಅದ್ದೂರಿ ಸ್ವಾಗತ

ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೦೨- ಸುದೀರ್ಘ ೨೧ ವರ್ಷಗಳ ಕಾಲ ಭಾರತ ದೇಶದ ಗಡಿ ಗಳಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಸೈನಿಕ ಸುರೇಶ ಎಂ ಅವರನ್ನು ಡೊಳ್ಳು, ಸೌಂಡ್, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ತುಂಬಾ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಹಾಲಿ ಹಾಗೂ ಮಾಜಿ ಸೈನಿಕರು, ಜನಪ್ರತಿ ನಿಧಿಗಳು ,ಯುವ ಸಂಘಟನೆ ಮುಖಂಡರು ಸನ್ಮಾನಿಸಿ, ಗೌರವಿಸಿದರು. ಸತತವಾಗಿ ೨೧ ವರ್ಷಗಳ ಕಾಲ ಭಾರತ ದೇಶದ ನಾನಾ ಗಡಿಗಳಲ್ಲಿ ವೀರ ಯೋಧನಾಗಿ, ಹೆಮ್ಮೆಯ ಪುತ್ರನಾಗಿ ತನ್ನ ಕುಟುಂಬ ವನ್ನು ಬಿಟ್ಟು ದೇಶದಲ್ಲಿನ ಪ್ರತಿ ಯೊಬ್ಬರಿಗಾಗಿ ಚಳಿ, ಮಳೆ, ಬಿಸಿಲು ಎನ್ನದೇ ತನ್ನ ಪ್ರಾಣ ಒತ್ತೆ ಇಟ್ಟು ಈ ದೇಶದ ಪ್ರತಿಯೊಬ್ಬರ ರಕ್ಷಣೆಗೆಗಾಗಿ ತನ್ನ ಜೀವವನ್ನು ಸವೆಸಿದ್ದಾರೆ. ಅಂತಹವರಿಗೆ ನಗರದ ಜನತೆ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ನಗರದ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಮೂಲಕ ಪಿಡಬ್ಲೂಡಿ ಕ್ಯಾಂಪ್‌ವರೆಗೆ ಮೆರವಣಿಗೆಯನ್ನು ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಿವನಗೌಡ ಗೋರೇಬಾಳ, ನಿವೃತ್ತ ಮಾಜಿ ಸೈನಿಕರಾದ ವೀರೇಶ ಯಾದವ್, ನಾಗರಾಜ ತುರವಿಹಾಳ, ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಬಸವರಾಜ ಗಸ್ತಿ, ಕಾರುಣ್ಯಾಶ್ರಮ, ಚನ್ನಬಸವ ಸ್ವಾಮಿ ಹನುಮಂತ ಕಲ್ಲಶೆಟ್ಟಿ, ಪ್ರದೀಪ್ ಪೂಜಾರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.