ತಾಯ್ತ ಟೀಸರ್ ಬಿಡುಗಡೆ

ಪ್ರೇಮಕಥೆಯ ಚಿತ್ರದಲ್ಲಿ   ಹಾರಾರ್, ಥ್ರಿಲ್ಲರ್, ಕಾಮಿಡಿ ಎಲ್ಲ ಅಂಶಗಳಿರುವ “ತಾಯ್ತ” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ನಟ ಧರ್ಮ ಮತ್ತಿತರು  ಟೀಸರ್ ಬಿಡುಗಡೆ ಮಾಡಿ ಹಾರೈಸಿದ್ದಾರೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ಲಯ ಕೋಕಿಲಾ, ತುಂಬಾ ಹೆದರಿಕೊಂಡಾಗ “ತಾಯ್ತ” ಕಟ್ಟಿಸಿಕೊ ಎಂದು ಹೇಳುತ್ತಾರೆ. ಮೊದಲ ನಿರ್ದೇಶನದ ಚಿತ್ರಕ್ಕೆ “ತಾಯ್ತ” ಎಂದು ಹೆಸರಿಟ್ಟಿದ್ದೀನಿ ಒಳ್ಳೆಯ ಚಿತ್ರ ನೀಡುವ ಉದ್ದೇಶವಿದೆ.ಚಿತ್ರದಲ್ಲಿ  ಸಾಧುಕೋಕಿಲ, ಪುಷ್ಪಸ್ವಾಮಿ, ಶಾಹಿದ್, ಶೋಭ್ ರಾಜ್ ಜೊತೆಗೆ ನಾನು ನಟಿಸಿದ್ದೇನೆ ಎಂದರು.

ನಾಯಕ ರಿಯಾನ್, ಚಿತ್ರದ ಕಥೆ ಇಷ್ಟವಾಯಿತು.   ಮೊದಲ ಚಿತ್ರ ಪ್ರೋತ್ಸಾಹವಿರಲಿ ಎಂದರೆ ನಾಯಕಿ ಹರ್ಷಿಕಾ ಪೂಣಚ್ಚ ಚಿತ್ರದಲ್ಲಿ  ಖುಷಿ ಎಂಬ ಹೆಸರಿನ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದೇನೆ. ಅಭಿನಯಿಸಿರುವ ಮೊದಲ ಹಾರಾರ್ ಚಿತ್ರ. ಕಾಲೇಜ್ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಏನೇನು ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದರು.

ನಿರ್ಮಾಪಕ ಶಾಹೀದ್ ,ಕಥೆ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾದೆ. ಚಿಕ್ಕಮಗಳೂರು, ಬೇಲೂರು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ನಾನು ಕೂಡ ನಟಿಸಿದ್ದೇನೆ. ಚಿತ್ರ ತರೆಗೆ ಬರಲು ಸಿದ್ದವಾಗಿದೆ ಎಂದರು. ಹಿರಿಯ ನಟಿ ಪುಷ್ಪಸ್ವಾಮಿ ಸಹ ತಮ್ಮ ಪಾತ್ರದ ಬಗ್ಗೆ ಹಂಚಿಕೊಂಡರು.