ತಾಯ್ತನ ಸುಖಕರವಾಗಿರಲಿ


ಸಂಜೆವಾಣಿ ವಾರ್ತೆ
ಸಂಡೂರು : ಅ: 10:  ತಾಯ್ತನ ಸುಖಕರವಾಗಿರ ಬೇಕೇ ವಿನಹ ಪ್ರಯಾಸಕರವಾಗಿರ ಬಾರದು ಅದಕ್ಕಾಗಿ ಗರ್ಭಧಾರಣೆಯ ಸಮಯದಲ್ಲಿ ವೈದ್ಯಕೀಯ ತಪಾಸಣೆ ಅತಿ ಅಗತ್ಯ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ (ಡಿ.ಟಿ.ಓ) ಡಾ. ಇಂದ್ರಾಣಿ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ತೊಡಕಿನ ಗರ್ಭಿಣಿಯರ ಆರೋಗ್ಯ ತಪಾಸಣೆ ಶಿಬಿರ ಉದ್ದೇಶಿಸಿ ಮಾತನಾಡಿ ತಾಯ್ತನ ಸುಖಕರವಾಗಿರ ಬೇಕೇ ವಿನಹ ಪ್ರಯಾಸಕರವಾಗಿರ ಬಾರದು ಅದಕ್ಕಾಗಿ ಗರ್ಭಧಾರಣೆಯ ಸಮಯದಲ್ಲಿ ವೈದ್ಯಕೀಯ ತಪಾಸಣೆ, ಪರೀಕ್ಷೆಗಳು, ಔಷಧೋಪಚಾರ, ಪೌಷ್ಟಿಕ ಆಹಾರ ಸೇವನೆ, ಹಣ್ಣುಗಳ ಸೇವನೆ, ಸರಳವಾದ ನಡಿಗೆ, ಸರಳವಾದ ಕೆಲಸಗಳಲ್ಲಿ ತೊಡಗಿಕೊಂಡು ಕುಟುಂಬದವರ ಜೊತೆ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು, ಕುಟುಂಬದವರು ಕಾಳಜಿಯಿಂದ ನೋಡಿಕೊಳ್ಳಬೇಕು, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ, ಆಂಬ್ಯಲೆನ್ಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಶೇಂಗಾ, ಹೆಸರು ಕಾಳು, ಬೆಲ್ಲ ಸೇರಿ ಪೌಷ್ಟಿಕ ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದರು, ಈ ಕಾರ್ಯಕ್ರಮದಲ್ಲಿ ಒ.ಪಿ ಜಂದಾಲ್ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಗರ್ಭಿಣಿ ಮಹಿಳೆಯರಿಗೆ ಎದೆ ಹಾಲಿನ ಮಹತ್ವದ ಕುರಿತು ಕಿರು ನಾಟಕ ಪ್ರದರ್ಶನದ ಮೂಲಕ ಅರಿವು ಮೂಡಿಸಿದರು, ನಸಿರ್ಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಂಧ್ಯಾ ಪ್ರಿಯದರ್ಶಿನಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಂಬಿಕಾ, ಆಶಾ, ಗೌಶಿಯಾ, ಹಿಮಬಿಂದು, ದೀಪಾ, ಮಧುಶ್ರೀ, ನೇತ್ರಾ, ಶ್ವೇತಾ ಅವರು ಪಾತ್ರಾಭಿನಯ ಮಾಡಿ ತೋರಿಸಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೀರೇಶ್,ಸದಸ್ಯರಾದ ಮಂಜುನಾಥ್, ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸಾದಿಯಾ, ಡಾ.ಗೋಪಾಲ್ ರಾವ್, ಡಾ.ಅನುಷಾ, ಮತ್ತು ಆರೋಗ್ಯ ಸಿಬ್ಬಂದಿಯವರು ಉಪಸ್ಥಿತರಿದ್ದರು