ತಾಯಿ ಹಾಲು ಮಗುವಿಗೆ ಸರ್ವಶ್ರೇಷ್ಠ  

ಸಂಜೆವಾಣಿ ವಾರ್ತೆ

 ಹಿರಿಯೂರು : ಆ -8; ಹಿರಿಯೂರಿನ ಸಂಜೀವಿನಿ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ವಿಶ್ವ ಸ್ತನ್ಯಪಾನ  ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು  ಡಾ. ಲತಾ ರಾಮಚಂದ್ರಪ್ಪ  ಮಾತನಾಡಿ ಸ್ತನ್ಯಪಾನದ  ಮಹತ್ವದ ಬಗ್ಗೆ ತಿಳಿಸಿದರು, ಹುಟ್ಟಿದ ಒಂದು ಗಂಟೆಯ ಒಳಗೆ ಮಗುವಿಗೆ ತಾಯಿಯು ಹಾಲು ಉಣಿಸುವುದರಿಂದ ಮಗು ಮತ್ತು ತಾಯಿಯ ಬಾಂಧವ್ಯ ಹೆಚ್ಚಾಗುತ್ತದೆ ತಾಯಿಯ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಮಗುವಿನ ಬೆಳವಣಿಗೆಗೆ ಉತ್ತಮ ಪೋಷಕಾಂಶ ಸಿಗುತ್ತದೆ, ತಾಯಿಯ ಎದೆಹಾಲು ಅತ್ಯಂತ ಶ್ರೇಷ್ಠ ಎಂದರು  ಹಾಗೂ  ಹೆಚ್ಚು ಹೆಚ್ಚು ಪೋಷಕಾಂಶ ಯುಕ್ತ ಆಹಾರಗಳನ್ನು ಹಾಗೂ ತರಕಾರಿಗಳನ್ನು ಸೇವಿಸಬೇಕು ಎಂದು ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಸಲಹೆ ನೀಡಿದರು.  ಡಾ. ರಾಮಚಂದ್ರಪ್ಪನವರು ಮಾತನಾಡಿ ಮಕ್ಕಳ ಆರೋಗ್ಯ ಚೆನ್ನಾಗಿರಬೇಕೆಂದರೆ ತಾಯಿಯ ಎದೆ ಹಾಲು, ಅತಿ ಅವಶ್ಯಕ ಎಂದು ತಿಳಿಸಿದರು.   ಡಾ.ಚಂದ್ರಕಲಾ ಮಾತನಾಡಿದರು.  ಇನ್ನರ್ವೀಲ್ ಅಧ್ಯಕ್ಷೆ ಲಕ್ಷ್ಮೀ ರಾಜೇಶ್ ರವರು ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಮಹಿಳೆಯರಿಗೆ ಹಾಗೂ ಗರ್ಭಿಣಿಯರಿಗೆ ಹಣ್ಣು ಗಳನ್ನು ವಿತರಿಸಿದರು.  ಕಾರ್ಯಕ್ರಮದಲ್ಲಿ ದಲ್ಲಿ ಇನ್ನರ್ವೀಲ್  ನ ಸೌಮ್ಯ ಪ್ರಶಾಂತ್, ಸರ್ವ ಮಂಗಳ,  ಸುಚಿತ್ರ, ಪದ್ಮ, ರೂಪ, ರೇಖಾ,ಸೌಜನ್ಯ ,ಶಾಮಲಾ , ಜ್ಞಾನೇಶ್ವರಿ,ಲತಾ ಮತ್ತಿತರರು ಪಾಲ್ಗೊಂಡಿದ್ದರು.