ತಾಯಿ ಸಾವಿತ್ರಿಬಾಯಿ ಪುಲೆ ದೇಶದ ಮೊದಲ ಮಹಿಳಾ ಶಿಕ್ಷಕಿಃಕುಮಾನಿ

ವಿಜಯಪುರ, ಜ.5-ತಾಯಿ ಶ್ರೀಮತಿ ಸಾವಿತ್ರಿಬಾಯಿ ಪುಲೆ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಹೆಣ್ಣುಮಕ್ಕಳಿಗೆ ವಿಧ್ಯೆ ನೀಡಿದ ತಾಯಿ ಎಂದು ಶ್ರೀ ಶಿವಶರಣೆ ನಿಂಬೆಕ್ಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್.ಡಿ. ಕುಮಾನಿ ಹೇಳಿದರು.
ತಾಲೂಕಿನ ಹೊನ್ನಳ್ಳಿ ಗ್ರಾಮದ ಶ್ರೀ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆ ಹಾಗೂ ಶ್ರೀಡಿ.ಎಮ್ ಕುಮಾನಿ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ಸಾವಿತ್ರಿಬಾಯಿ ಪುಲೆ ಜಯಂತಿಯನ್ನು ಸರಳವಾಗಿ ಆಚರಿಸುವ ಮೂಲಕ ಮಾತನಾಡಿದ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ಜೀವನವನ್ನೆ ತ್ಯಾಗ ಮಾಡಿದ ಮಹಾನ್ ತಾಯಿ ಅವರು ಶಿಕ್ಷಕರಷ್ಟೆ ಅಲ್ಲ ಹೃಯವಂತ ತಾಯಿಯೂ ಶಿಸ್ತು, ಬದ್ಧತೆ ಹಾಗೂ ಸಹನೆಯ ವ್ಯಕ್ತಿತ್ವವುಳ್ಳವರಾಗಿದ್ದರು ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತಾಗಿವೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಾಳಾಗಿ ಭೀಮರಾಯ ತಳವಾರ ಹಾಗೂ ಮಲ್ಲಿಕಾರ್ಜುನ ಮಾಲಗಾರ ಭಾಗವಹಿಸಿದ್ದರು. ಪ್ರಾಚಾರ್ಯ ಎಸ್.ಎಮ್ ಮಣಿಯಾರ ಸ್ವಾಗತಿಸಿದರು ಸಿ.ಎಸ್ ರೂಗಿ ನಿರೂಪಿಸಿದರು ಬಿ.ಜೆ. ಗರೇಬಾಳ ಎಚ್.ಪಿ ದೇಶಪಾಂಡೆ ವಂದಿಸಿದರು. ಮಾತನಾಡಿದರು. ಜಿ.ಕೆ ಜಹಗೀರದಾರ ಪ್ರಾಸ್ತಾವಿಕ ಮಾತನಾಡಿದರು ಕಾರ್ಯಕ್ರಮದಲ್ಲಿ ಎಸ್.ಎಮ್ ಪಾಠಕ ಬಿ.ಆರ್ ಲಾಳೆ, ಜೆ.ಎಮ್ ಹೊನ್ನಳ್ಳಿ, ಪಿ.ಎಸ್ ಕುಮಾನಿ ಹಾಗೂ ಇತರರು ಉಪಸ್ಥಿತರಿದ್ದರು.