ತಾಯಿ ವಿಷಯಕ್ಕೆ ಬಂದರೆ ಸಮ್ಮನೆ ಇರ್ತೇವಾ : ನಟ ದರ್ಶನ್ ಗುಡುಗು

* ಚಿ.ಗೋ ರಮೇಶ್

” ಪರಭಾಷೆ ಮಂದಿ ಜಕ್ಕೂರು ಆಚೆ ತಮ್ಮ ಚಿತ್ರದ ಪ್ರಚಾರ ಮಾಡ್ತಾ ಇದ್ದರು. ಈಗ ನಗರದೊಳಗೆ ಬಂದಿದ್ದಾರೆ. ಮುಂದೆ ನಮ್ಮನ್ನೇ ಹೊರ ಹಾಕಿ ಅವರು ಜಾಗ ಆಕ್ರಮಿಸಿಕೊಳ್ತಾರೆ.. ಇದಕ್ಕೆ ಅವಕಾಶ ಮಾಡಿಕೊಡಬೇಕಾ.. ನಮಗೆ ನಮ್ಮ ತಾಯಿ ಮುಖ್ಯ. ಮೊದಲು ನಮ್ಮ ತಾಯಿಯನ್ನು ಪ್ರೀತಿಸುವುದು ಗೌರವಿಸೋಣ.. ಹಾಗಂತ ಬೇರೆ ತಾಯಿಯನ್ನು ಪ್ರೀತಿಸಬೇಡಿ ಅಂತ ಹೇಳ್ತಾ ಇಲ್ಲ.‌ಮೊದಲು ನಮ್ಮ ತಾಯಿ ನಮಗೆ ಮುಖ್ಯ…”

ಹೀಗಂತ ಪರಭಾಷಾ ಚಿತ್ರಗಳ ವಿರುದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಟುರು ಹಾಕುವ ಮೂಲಕ ಗುಡುಗಿದ್ದಾರೆ..

” ಯಾರಾದರೂ ನಮ್ಮ ತಾಯಿ ವಿಷಯಕ್ಕೆ ಬಂದರೆ ಬಿಡ್ತೇವಾ ಇಲ್ಲ ತಾನೆ.. ಹಾಗೆ ಕೂಡ ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೂ ಅಷ್ಟೇ.. ಇದು ಪ್ರೀತಿಯೋ ಸ್ವಾರ್ಥನೋ ಮೊದಲು ಕನ್ನಡ ಚಿತ್ರಗಳನ್ನು ಪ್ರೀತಿಸಿ, ಅವುಗಳನ್ನು ಪ್ರೋತ್ಸಾಹ ಮಾಡಿ, ಇಲ್ಲದಿದ್ದರೆ ಪರಭಾಷಿಕರ ಹಾವಳಿ ಹೆಚ್ಚಾಗಿ ಬಿಡುತ್ತದೆ ಹುಷಾರು ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು.

ಬೇರೆ ಭಾಷೆ, ಬೇರೆ ತಾಯಿಯನ್ನು ಪ್ರೀತಿಸಬೇಡಿ ಎಂದು ಹೇಳುವುದಿಲ್ಲ.ಆದರೆ ನಮಗೆ ನಮ್ಮ‌ ತಾಯಿಯ ಮುಖ್ಯ. ನಟ ಚಿಕ್ಕಣ್ಣ ಹೇಳಿದ ಹಾಗೆ ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಬಂದು ನೋಡಿ.  ಒಬ್ಬ ನಟರ ಚಿತ್ರ ಬಿಡುಗಡೆಯಾಗುವಾಗ ಮತ್ತೊಬ್ಬ ನಟರು ಕೈಜೋಡಿಸಿ ಒಬ್ಬರಿಗೊಬ್ಬರು ಸಾಥ್ ನೀಡಿ ಎಂದು ಸಲಹೆ ನೀಡಿದರು

ನಾನು ವಿಲನ್ನೇ…

ಕಾವೇರಿ ವಿಷಯದಲ್ಲಿ ಏನೋ ಮಾತನಾಡಿದರೂ ಅಲ್ಲೊಂದು ಏನಾದರೂ ಹುಡುಕಿ ತೆಗೆಯುತ್ತಾರೆ. ಕಾವೇರಿ ನನ್ನೊಬ್ಬನಿಗೆ ಬೇಕಾ ಚಿತ್ರರಂಗದಲ್ಲಿ ಇರುವ ಬೇರೆಯವರಿಗೆ ಬೇಡವಾ..‌ಮಾತನಾಡಿದರೆ ನಾನು ವಿಲನ್ ..ನಾನು ವಿಲನ್ನೇ ಎಂದರು ನಟ ದರ್ಶನ್. ಕಾವೇರಿ ವಿಷಯದಲ್ಲಿ ಪ್ರತಿಭಟನೆಗೆ ಬಾರದ ಕಾವೇರಿ ಬಗ್ಹೆ ಚಕಾರ ಎತ್ತದ  ವಿರೋದಿಗಳಿಗೆ ಮಾತಿನಲ್ಲಿಯೇ ತಿರುಗೇಟು ನೀಡಿದರು ದರ್ಶನ್.

ಹಿತ್ತಾಳೆ ಕಿವಿಯಾಗಬೇಡಿ

ಅಭಿಷೇಕ್ ಅಂಬರೀಷ್, ಧನ್ವೀರ್  ಚಿಕ್ಕಣ್ಣ ಸೇರಿದಂತೆ ಬಹುತೇಕ ಸ್ನೇಹಿತರು, ನಟರ ಪೋನ್‌ ನಂಬರ್ ಎಲ್ಲರ ಬಳಿಯೂ ಇರುತ್ತೆ. ಯಾರೇ ಏನೇ ಅಂದರೂ ಹಿತ್ತಾಳೆ ಕಿವಿಯಾಗಬೇಡಿ. ಒಬ್ಬರಿಗೊಬ್ಬರು ಪೋನ್‌ಮಾಡಿಕೊಳ್ಳಿ, ಒಂದೇ ದಿನ‌ ತಮ್ಮ ಚಿತ್ರ ಬರದ ಹಾಗೆ ನೋಡಿ‌ಕೊಳ್ಳಿ ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತೆ.

ಯಾರೇ  ಕಿವಿಯಲ್ಲಿ ಏನೋ ಊದಿದರೆ ಕೇಳಿಸಿಕೊಳ್ಳಬೇಡಿ, ಪರಸ್ಪರ ಮಾತನಾಡಿ ಹಿಂದೆ ಮುಂದೆ ಹೋಗಿ, ಸ್ನೇಹ ಹೀಗೆ ಸದಾ ಕಾಲ ಮುಂದುವರಿಯಲಿ ಎಂದು ನಟ ದರ್ಶನ್  ಯುವ ನಟಿರಿಗೆ ಕಿವಿಮಾತು ಹೇಳಿದರು.

ಟ್ರೈಲರ್ ಬಿಡುಗಡೆ

” ಕೈವ ” ಚಿತ್ರದ ಟ್ರೈಲರ್ ಅನ್ನು ದರ್ಶನ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಜಯತೀರ್ಥ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಧನ್ವೀರ್ , ಮೇಘಾ ಶೆಟ್ಟಿ ನಾಯಕ,ನಾಯಕಿ. ಉಳಿದಂತೆ ಜಾನ್ವಿ ರಾಯಲ, ಗಿರಿರಾಜ್,ದಿನಕರ್ ತೂಗುದೀಪ, ರಮೇಶ್ ಇಂದಿರಾ, ರಾಘು ಶಿವಮೊಗ್ಗ‌ ,ಅಶ್ವಿನ್ ಹಾಸನ್, ಸೇರಿದಂತೆ ಕಲಾವಿದರ ದಂಡೇ ಚಿತ್ರದಲ್ಲಿದೆ. ಡಿಸೆಂಬರ್ 8 ರಂದು ಚಿತ್ರ ತೆರೆಗೆ ಬರಲಿದೆ.

ಕರು‌ ಕಾಣಿಕೆ

ನಟ ದರ್ಶನ್ ಅವರಿಗೆ ನಟ ಧನ್ವೀರ್ ಅಭಿಮಾನದಿಂದ ಕರು ಕಾಣಿಕೆ ನೀಡುವ ಮೂಲಕ ಅಭಿಮಾನ ಮರೆದಿದ್ದಾರೆ. ಕರುಗೆ ಶೋಕ್ದಾರ್ ಎಂದು ಹೆಸರಿಡುವುದಾಗಿ ನಾಮಕರಣ ಮಾಡಿದರು.

ಗಿಫ್ಟ್ ಅಂದಾಗ ಭಯ ಆಗಿತ್ತು. ಈಗ ಉಡುಗೊರೆ ಪ್ರೀತಿ ಮತ್ತು ಖುಷಿ ಕೊಟ್ಟಿದೆ ಎಂದರು ದರ್ಶನ್.